ರಾಷ್ಟ್ರೀಯ

ಜಯಲಲಿತಾರ ಸಾವಿನಿಂದ ಆಘಾತಕ್ಕೊಳಗಾಗಿ ಸತ್ತವರು ಎಷ್ಟು ಗೊತ್ತೇ…?

Pinterest LinkedIn Tumblr

jaya13

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಕಾಲಿಕ ಮರಣದಿಂದಾಗಿ ಆಘಾತಕ್ಕೊಳಗಾಗಿ ಈವರೆಗೂ ತಮಿಳುನಾಡಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 77ಕ್ಕೇರಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಎಐಎಡಿಎಂಕೆ ಪಕ್ಷ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ತಮಿಳುನಾಡಿನಾದ್ಯಂತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ ಸುಮಾರು 77 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಎಐಎಡಿಎಂಕೆ ಕಾರ್ಯಕರ್ತರು ಹಾಗೂ ಜಯಲಲಿತಾ ಅವರ ಅಭಿಮಾನಿಗಳು ಸೇರಿದ್ದಾರೆ. ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರು. ಹಾಗೂ ಜಯಾ ನಿಧನ ಸುದ್ದಿಯಿಂದ ಆಘಾತಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ ಪಕ್ಷದ ಕಾರ್ಯಕರ್ತರಿಗೆ ತಲಾ 50 ಸಾವಿರ ರು.ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ.

ಅಂತೆಯೇ ಜಯಲಲಿತಾ ನಿಧನದ ಬಳಿಕ ಆಘಾತಕ್ಕೊಳಗಾಗಿ ಮೃತರಾದ ವ್ಯಕ್ತಿಗಳ ಹೆಸರಿರುವ ಪಟ್ಟಿಯನ್ನೂ ಕೂಡ ಎಐಎಡಿಎಂಕೆ ಪಕ್ಷ ನಿನ್ನೆ ಬಿಡುಗಡೆ ಮಾಡಿದ್ದು, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಸಿದೆ.

ಜಯಲಲಿತಾ ನಿಧನವಾದ ಸುದ್ದಿ ಸುದ್ದಿವಾಹಿನಿಗಳನ್ನು ಪ್ರಸಾರವಾಗುತ್ತಿದ್ದಂತೆಯೇ ಅವರ ಹಲವು ಅಭಿಮಾನಿಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಇಂದಿಗೂ ತಮಿಳುನಾಡಿನ ವಿವಿಧ ಆಸ್ಪತ್ರೆಗಳಲ್ಲಿ ಇಂತಹ ಪ್ರಕರಣಗಳು ದಾಖಲಾಗುತ್ತಿದೆ. ಒಟ್ಟಾರೆ ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಜನರ ಪ್ರೀತಿಯ ಅಮ್ಮಾ ನಿಧನದಿಂದಾಗಿ ಆಘಾತಗೊಂಡಿರುವ ಅವರ ಅಭಿಮಾನಿಗಳು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕುತ್ತಿದ್ದು, ಈ ರೀತಿ ಸಾವಿಗೀಡಾಗುತ್ತಿರುವ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಶಂಕೆ ವ್ಯಕ್ತವಾಗುತ್ತಿದೆ.

Comments are closed.