ಕರಾವಳಿ

ವಂಡ್ಸೆ ನೆಂಪು ಸರಕಾರಿ ಪ್ರೌಢಶಾಲೆ- ಪದವಿ ಪೂರ್ವ ಕಾಲೇಜಿನಲ್ಲಿ ಟಾಯ್ಲೆಟ್ ಪ್ರಾಬ್ಲಂ..!

Pinterest LinkedIn Tumblr

ಕುಂದಾಪುರ: ಬಯಲು ಶೌಚಾಲಯ ಮುಕ್ತ ಮಾಡ್ತೇವೆ ಅಂತಾ ಹೊರಟಿರುವ ಸರಕಾರ ಸರಕಾರಿ ಶಾಲಾ ಕಾಲೇಜಿಗೆ ಸರಿಯಾಗಿ ಶೌಚಾಲಯ ಭಾಗ್ಯ ನೀಡಿಲ್ಲ. ಇಲ್ಲೊಂದು ಸರಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶೌಚಾಲಯ ಸಮಸ್ಯೆಯಿಂದ ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ. ಇದು ಕುಂದಾಪುರ ತಾಲೂಕಿನ ವಂಡ್ಸೆ ನೆಂಪು ಎಂಬಲ್ಲಿನ ಸರಕಾರಿ ಶಾಲೆಯ ಮಕ್ಕಳ ಗೋಳಿನ ಕಥೆ.

kundapura_vandse_toilet-problem-11 kundapura_vandse_toilet-problem-1 kundapura_vandse_toilet-problem-5 kundapura_vandse_toilet-problem-2 kundapura_vandse_toilet-problem-3 kundapura_vandse_toilet-problem-6 kundapura_vandse_toilet-problem-9 kundapura_vandse_toilet-problem-8 kundapura_vandse_toilet-problem-4 kundapura_vandse_toilet-problem-7 kundapura_vandse_toilet-problem-12 kundapura_vandse_toilet-problem-10

ಹೌದು… ಸರಕಾರಿ ಪ್ರೌಡಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಎರಡೂ ಕೂಡ ಒಂದೇ ಆವರಣದಲ್ಲಿದೆ. ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾದ ಈ ಶಾಲೆ ಹಾಗೂ ಕಾಲೇಜಿಗೆ ಈ ಭಾಗದ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರ್ತಾರೆ. ಆದರೇ ಇಲ್ಲಿ ವಿದ್ಯಾರ್ಜನೆಗಾಗಿ ಬರುವ ವಿದ್ಯಾರ್ಥಿಗಳಿಗೆ ಎಲ್ಲಾ ವ್ಯವಸ್ಥೆಗಳು ಪೂರಕವಾಗಿದ್ದರೂ ಕೂಡ ಮುಖ್ಯವಾದ ಶೌಚಾಲಯ ಸಮಸ್ಯೆಯೇ ವಿದ್ಯಾರ್ಥಿಗಳಿಗೆ ನಿತ್ಯ ಯಾತನೆಯನ್ನುಂಟು ಮಾಡುತ್ತಿದೆ. ಶಾಲೆ ಹಾಗೂ ಕಾಲೇಜಿನ ಗಂಡು ಮಕ್ಕಳು ಹೊರಭಾಗದಲ್ಲಿಯೇ ಶೌಚಕ್ರಿಯೆ ಮಾಡಬೇಕಿದೆ. ಇನ್ನು ಹೆಣ್ಣುಮಕ್ಕಳಿಗಾಗಿ ಶೌಚಾಲಯ ವ್ಯವಸ್ಥೆಯಿದ್ದರೂ ಕೂಡ ಅದು ಸುವ್ಯವಸ್ಥಿತವಾಗಿಲ್ಲ. ಶೌಚಾಲಯದ ಬಾಗಿಲು ಕಿಟಕಿಗಳು ಕೆಟ್ಟುಹೋಗಿದೆ. ಒಳಗಿನಿಂದ ಚಿಲಕ ಹಾಕಿಕೊಂಡು ಭದ್ರತೆಗೊಳಿಸಿಕೊಳ್ಳಲು ಚಿಲಕಗಳೇ ಇಲ್ಲ.

ವಂಡ್ಸೆ ನೆಂಪುವಿನ ಈ ಸರಕಾರಿ ಹೈಸ್ಕೂಲಿನಲ್ಲಿ ಸುಮಾರು 240 ವಿದ್ಯಾರ್ಥಿಗಳಿದ್ದಾರೆ. ಅವರ ಪೈಕಿ 131 ಹುಡುಗರಿದ್ದು 109 ವಿದ್ಯಾರ್ಥಿನಿಯರಿದ್ದಾರೆ. ಆದರೇ ವಿದ್ಯಾರ್ಥಿಗಳ ಸಂಖ್ಯೆಗನುಗೂಣವಾಗಿ ಇಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲ. ವಿದ್ಯಾರ್ಥಿನಿಯರಿಗಾದರೂ ಅಭದ್ರವಾಗಿರುವ ಒಂದೆರಡು ಶೌಚಾಲಯವಿದ್ದರೂ ಕೂಡ ಹುಡುಗರಿಗೆ ಅದೂ ಕೂಡ ಇಲ್ಲ. ಇನ್ನು ಅಧ್ಯಾಪಕರಿಗೂ ಕೂಡ ಈ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಶೌಚಾಲಯ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ನಾಲ್ಕು ಲಕ್ಷ ಬಿಡುಗಡೆಯಾಗಿದೆ ಎನ್ನಲಾಗಿದ್ದರೂ ಕೂಡ ಗುದ್ದಲಿ ಪೂಜೆ ನಡೆಸಿ ಪಾಯ ತೋಡಿ ವರ್ಷಗಳೇ ಕಳೆದರೂ ಕೆಲಸ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಇನ್ನು ಪದವಿ ಪೂರ್ವ ಕಾಲೇಜಿನಲ್ಲಿ 133ವಿದ್ಯಾರ್ಥಿಗಳಿದ್ದು 71 ಮಂದಿ ಹುಡುಗರು ಹಾಗೂ 62 ಮಂದಿ ವಿದ್ಯಾರ್ಥಿನಿಯರಿದ್ದಾರೆ. ಸಂಬಂದಪಟ್ಟವರಿಗೆ ಮನವಿಗಳನ್ನು ನೀಡಿದರೂ ಕೂಡ ಈವರೆಗೂ ಯಾವುದೇ ರೆಸ್ಫಾನ್ಸ್ ಸಿಕ್ಕಿಲ್ಲವಂತೆ.

ಒಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎನ್ನುವ ಮಾತುಗಳು ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿದೆ. ಸರಕಾರಿ ಶಾಲೆ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅವರ ಬೇಡಿಕೆಗಳನ್ನು ಇನ್ನಾದರೂ ಸಂಬಂದಪಟ್ಟವರು ಪೂರೈಸುವರೇ ಎಂಬುದನ್ನ ಕಾದುನೋಡಬೇಕಿದೆ.
——————–

ವರದಿ- ಯೋಗೀಶ್ ಕುಂಭಾಸಿ

Comments are closed.