ಅಂತರಾಷ್ಟ್ರೀಯ

ಅರ್ಧ ಗಂಟೆಗಳ ಕಾಲ ಬ್ಲೂ ಫಿಲ್ಮ್ ಪ್ರಸಾರ ಮಾಡಿದ ಪ್ರತಿಷ್ಠಿತ ಸುದ್ದಿ ವಾಹಿನಿ !

Pinterest LinkedIn Tumblr

sexxx

ಬಾಸ್ಟನ್ : ಪ್ರತಿಷ್ಠಿತ ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಸಿ ಎನ್ ಎನ್ ಅರ್ಧ ಗಂಟೆಗಳ ಕಾಲ ತನ್ನ ವಾಹಿನಿಯಲ್ಲಿ ಹಾರ್ಡ್ ಕೋರ್ ಬ್ಲೂ ಫಿಲ್ಮ್ ಪ್ರಸಾರ ಮಾಡಿದೆ. ಆದರೆ ತಮ್ಮ ಚಾನಲ್ ನಲ್ಲಿ ಇಂತಹದೊಂದು ಪ್ರಮಾದ ಆಗಿರುವುದು ಚಾನಲ್ ಸಿಬ್ಬಂದಿಗೆ ಗೊತ್ತಾಗುವಾಗ ಕನಿಷ್ಠ ಅರ್ಧ ಗಂಟೆ ಕಳೆದಿದೆ.

ಆಂಟನಿ ಬಾರ್ಡನ್ ಅವರ ಷೋ ನೋಡಲೆಂದು ಅಮೇರಿಕಾದ ಬಾಸ್ಟನ್ ನಗರದ ಜನರು ಸಿ ಎನ್ ಎನ್ ಚಾನಲ್ ನೋಡಿದಾಗ ಅವರಿಗೆ ಆಘಾತವಾಗಿದೆ. ಅದರಲ್ಲಿ ಅದರಲ್ಲಿ ತಪ್ಪಾಗಿ ಹಾರ್ಡ್ ಕೋರ್ ಬ್ಲೂ ಫಿಲ್ಮ್ ಪ್ರಸಾರವಾಗುತ್ತಿತ್ತು. ಅದೂ ಭರ್ತಿ ಅರ್ಧ ಗಂಟೆ ಕಾಲ.

ಈ ಪ್ರಮಾದಕ್ಕೆ ಚಾನಲ್ ನ ಪ್ರೋಗ್ರಾಮಿಂಗ್ ವಿಭಾಗದ ಸಮನ್ವಯ ಕೊರತೆ ಕಾರಣ ಎಂದು ಕೇಳಿ ಬಂದಿದ್ದರೆ, ಆ ಭಾಗದ ಕೇಬಲ್ ಆಪರೇಟರ್ ತಪ್ಪಿನಿಂದ ಈ ಆಕ್ಷೇಪಾರ್ಹ ದೃಶ್ಯಗಳು ಪ್ರಸಾರವಾಗಿವೆ ಎಂದು ಸಿ ಎನ್ ಎನ್ ಹೇಳಿಕೆ ನೀಡಿದೆ. ಆದರೆ ತಪ್ಪು ಯಾರದ್ದಾದರೂ ಅದನ್ನು ಸರಿಪಡಿಸಲು ಅರ್ಧ ಗಂಟೆ ತಗುಲಿದ್ದು ಹೇಗೆ ಎಂಬುದು ವೀಕ್ಷಕರ ಪ್ರಶ್ನೆಯಾಗಿದೆ.

ನ್ಯೂಜೆರ್ಸಿಯ ಕೇಬಲ್ ಟಿವಿ ಸೇವಾದಾರ ಆರ್ ಸಿ ಎನ್ ಅವರ ತಪ್ಪಿನಿಂದ ಈ ಎಡವಟ್ಟು ನಡೆದಿದೆ ಎಂದು ಕೆಲವು  ಪತ್ರಕರ್ತರು ಹೇಳಿದ್ದಾರೆ. ಈ ಸಂಸ್ಥೆಯ ಜನರಲ್ ಮ್ಯಾನೇಜರ್ ಜೆಫ್ ಕಾರ್ಲ್ ಸನ್ ಅವರು ಈ ಬಗ್ಗೆ ತನಿಖೆ ನಡೆಯುತ್ತಿದೆ. ಈವರೆಗೆ ಇದಕ್ಕೆ ಕಾರಣ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

Comments are closed.