ರಾಷ್ಟ್ರೀಯ

ಮನ್ ಕಿ ಬಾತ್’ನಲ್ಲಿ ಮೋದಿ ಹೇಳಿದ್ದೇನು…?

Pinterest LinkedIn Tumblr

man-ki-baat

ನವದೆಹಲಿ: ರು.500 ಹಾಗೂ 1,000 ನೋಟುಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವಿಕೆಯನ್ನು ದೇಶದ ಜನತೆ ಸ್ವಾಗತಿಸಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧನ್ಯವಾದ ಹೇಳಿದ್ದು, ದೇಶವನ್ನು ನಗದು ರಹಿತ ರಾಷ್ಟ್ರವಾಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಭಾನುವಾರ ಹೇಳಿದ್ದಾರೆ.

26ನೇ ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಅವರು, ದುಬಾರಿ ನೋಟಿನ ಮೇಲೆ ನಿಷೇಧ ಹೇರಿರುವುದರ ಕುರಿತಂತೆ ವಿರೋಧ ಪಕ್ಷಗಳು ಸಾಕಷ್ಟು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದರೂ, ದೇಶದ ಜನತೆ ಕೇಂದ್ರ ಸರ್ಕಾರ ನಿರ್ಧಾರಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದೆ. ದೇಶದ ಜನತೆಗೆ ಈ ಮೂಲಕ ಧನ್ಯವಾದ ಹೇಳಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.

ಕಳೆದ ತಿಂಗಳು ದೇಶದಾದ್ಯಂತ ದೀಪಗಳ ಹಬ್ಬ ದೀಪಾವಳಿಯನ್ನು ಆಚರಿಸಿದ್ದೆವು. ಪ್ರತೀ ವರ್ಷದಂತೆಯೇ ಈ ವರ್ಷಕೂಡ ನಾನು ನಮ್ಮ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದೆ. ಈ ವೇಳೆ ದೇಶದ ಜನತೆ ನಮ್ಮ ವೀರ ಯೋಧರಿಗೆ ಸಂದೇಶಗಳನ್ನು ರವಾನಿಸಿದ್ದರು. ಜನತೆಯ ಸಂದೇಶ ಯೋಧರ ಮನವನ್ನು ಮುಟ್ಟಿದೆ.

ಯೋಧರೊಬ್ಬರು ನನಗೆ ಪತ್ರವೊಂದನ್ನು ಬರೆದಿದ್ದರು. ನಮಗೆ ದೀಪಾವಳಿ ಹಬ್ಬ ಎಲ್ಲಾ ಹಬ್ಬದಂತೆಯೇ ಆಗಿದ್ದು, ಹಬ್ಬದ ದಿನದಂದೂ ನಾವು ದೇಶವನ್ನು ಕಾಯುತ್ತೇವೆಂದು ಹೇಳಿದ್ದರು. ದೀಪಾವಳಿ ಹಬ್ಬದ ದಿನದಂದು ನಾನು ಜಮ್ಮು ಮತ್ತು ಕಾಶ್ಮೀರದ ಗ್ರಾಮವೊಂದಕ್ಕೆ ಭೇಟಿ ನೀಡಿದ್ದೆ. ಈ ವೇಳೆ ಅಲ್ಲಿನ ಜನತೆಗೆ ನಿಮ್ಮ ಮುಂದಿನ ಪೀಳಿಗೆಗಾಗಿ ಅಭಿವೃದ್ಧಿ ಕಡೆಗೆ ಗಮನ ಹರಿಸಿ ಎಂದು ತಿಳಿಸಿದ್ದೆ. ಗ್ರಾಮಕ್ಕೆ ಭೇಟಿ ನೀಡಿದ್ದು ನನಗೆ ಬಹಳ ಸಂಸತವನ್ನು ತಂದಿದ್ದು, ಗ್ರಾಮದ ಅಭಿವೃದ್ಧಿಗೆ ಸಹಾಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರು.500 ಹಾಗೂ 1,000 ನೋಟಿ ಮೇಲೆ ನಿಷೇಧ ಹೇರಿರುವ ಕುರಿತಂತೆ ಮಾಹಿತಿ ನೀಡಿದ ಪ್ರತಿಯೊಬ್ಬರು ನನ್ನನ್ನು ಕೇಳಿದ್ದರು. ಜನತೆಗೆ ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಕಪ್ಪುಹಣ ಹೊಂದಿರುವವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ನನಗೆ 50 ದಿನಗಳ ಕಾಲಾವಕಾಶವನ್ನು ಕೊಡಿ. ನಿರ್ಧಾರ ತೆಗೆದುಕೊಳ್ಳುವಾಗ ನಾನು ಹೇಳಿದ್ದೆ, ಈ ನಿರ್ಧಾರ ಅತ್ಯಂತ ಕಠಿಣವಾಗಿದ್ದು, ಸಾಕಷ್ಟು ಸಮಸ್ಯೆಯನ್ನುಂಟು ಮಾಡಲಿದೆ ಎಂದು ಹೇಳಿದ್ದೆ. 70 ವರ್ಷಗಳಿಂದ ದೇಶಕ್ಕೆ ಎದುರಾಗಿದ್ದ ಸಮಸ್ಯೆಗಳನ್ನು ಸರಿಪಡಿಸಲು ಕಾಲಾವಕಾಶ ಬೇಕಾಗುತ್ತದೆ. 70 ವರ್ಷಗಳ ಭ್ರಷ್ಟಾಚಾರವನ್ನು ಸರಿಪಡಿಸುವುದು ಸುಲಭದ ಕೆಲಸವಲ್ಲ.

ಕಪ್ಪುಹಣ ಹೊಂದಿರುವವರು ಬಡವರ ಖಾತೆಗಳಿಗೆ ಹಣವನ್ನು ಜಮಾವಣೆ ಮಾಡುತ್ತಿದ್ದು, ಕಾಳಧನಿಕರು ಬಡವರ ಜೀವನದಲ್ಲಿ ಆಟವಾಡಬಾರದು ಎಂದು ಎಚ್ಚರಿಸಿದ್ದಾರೆ.

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ರೈತರ ಪಾತ್ರ ಅತ್ಯಂತ ಪ್ರಮುಖವಾದದ್ದು. ಸಣ್ಣ ಉದ್ಯಮಗಳು ಉದ್ಯೋಗಗಳನ್ನು ಸೃಷ್ಟಿಸುವುದಲ್ಲದೇ, ದೇಶದ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಆರ್ಥಿಕ ಬದಲಾವಣೆ ನಿರ್ಧಾರದಿಂದ ಕಾರ್ಮಿಕರು, ರೈತರು ಹಾಗೂ ಬಡವರಿಗೆ ಸಾಕಷ್ಟು ಸಮಸ್ಯೆಯನ್ನು ಎದುರಿಸುವಂತಾಗಿದೆ. ಕಳೆದ ಬಜೆಟ್ ವೇಳೆ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಇದೀಗ ಸಣ್ಣ ಉದ್ಯಮಗಳೂ ಕೂಡ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿವೆ. ಕಾನೂನು ಅವರವನ್ನು ತಡೆಯಲು ಸಾಧ್ಯವಿಲ್ಲ.

ಸಣ್ಣ ವ್ಯವಹಾರಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದು ನನಗೆ ಗೊತ್ತಿದೆ. ಆದರೆ, ತಾಂತ್ರಿಕತೆ ಬಳಕೆ, ಮೊಬೈಲ್ ಆ್ಯಪ್ ಬಳಕೆ, ಮೊಬೈಲ್ ಬ್ಯಾಂಕ್ ಗಳು ಹಾಗೂ ಕ್ರಿಡಿಟ್ಕಾಪ್ಡ್ ಬಳಕೆಗಳು ದೇಶದಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಿದೆ.

ಕೆಲ ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ವೇತನವನ್ನ ನೀಡುತ್ತಿಲ್ಲ. ಪೇಪರ್ ಮೇಲೆ ಬರೆಯುವುದಕ್ಕಿಂತಲೂ ಅತ್ಯಂತ ಕಡಿಮೆ ವೇತನವನ್ನು ನೀಡಲಾಗುತ್ತಿದೆ. ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದರೆ ಈ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ.

ದೇಶದಲ್ಲಿರುವ ಕಾರ್ಮಿಕರು ಕೂಡ ಬ್ಯಾಂಕ್ ನಲ್ಲಿ ಖಾತೆಗಳನ್ನು ತೆರೆಯಬೇಕಿದೆ. ಬ್ಯಾಂಕ್ ನಲ್ಲಿರುವ ತಮ್ಮ ಖಾತೆಯ ಮೂಲಕವೇ ತಮ್ಮ ತಮ್ಮ ವೇತನವನ್ನು ಹಾಕಬೇಕಿದೆ. ಇದರಿಂದ ಕನಿಷ್ಠ ವೇತನ ಕಾಯ್ದೆ ಅನುಸರಿಸಲಾಗುತ್ತದೆ.

ಬ್ಯಾಂಕ್ ಖಾತೆ ತೆರೆಯುತ್ತಿದಂತೆಯೇ ಜನರು ತಮ್ಮ ಮೊಬೈಲ್ ಫೋನಿನ ಮೂಲಕ ಇ-ವಾಲೆಟ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಕಾರ್ಡ್ ಗಳ ಬಳಕೆ ಮೂಲಕ ಅಂಗಡಿಗಳಲ್ಲಿ ಯಾವುದೇ ವಸ್ತುಗಳನ್ನು ಕೊಂಡುಕೊಳ್ಳುಬಹುದು.

ಕೇಂದ್ರ ನಿರ್ಧಾರಕ್ಕೆ ಯುವಕರು ಹಾಗೂ ಮಹಿಳೆಯರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ತಾಂತ್ರಿಕತೆ ಬಗ್ಗೆ ಅರಿವಿಲ್ಲದ ವಯಸ್ಸಾದವರಿಗೆ ಮಹಿಳೆಯಲು ಹಾಗೂ ಯುವಕರು ಸಹಾಯ ಮಾಡಬೇಕಿದೆ. ದೇಶವನ್ನು ನಗದು ರಹಿತ ರಾಷ್ಟ್ರವಾಗಿಸುವುದು ನಮ್ಮ ಕನಸಾಗಿದೆ. ಖಂಡಿತವಾಗಿಯೂ ದೇಶವನ್ನು ನಗದು ರಹಿತ ಸಮಾಜವಾಗಿಸುತ್ತೇವೆ.

ತಾಂತ್ರಿಕತೆಯನ್ನು ಬಳಸಿಕೊಂಡು ಮೊಬೈಲ್ ಮೂಲಕವೇ ಹಣವನ್ನು ವರ್ಗಾವಣೆ ಮಾಡಬರುದು. ಒಬ್ಬ ವ್ಯಕ್ತಿ ತನ್ನ ಕುಟುಂಬಕ್ಕೆ ತಾಂತ್ರಿಕತೆಯ ಬಗ್ಗೆ ಹೇಳಿಕೊಡಬಲ್ಲ. ಕಪ್ಪುಹಣದ ವಿರುದ್ಧ ನಮ್ಮ ಹೋರಾಟವಾಗಿದೆ. ಕೀನ್ಯಾದಲ್ಲಿ ಮೊಬೈಲ್ ಮೂಲಕವೇ ಹೆಚ್ಚಿನ ವ್ಯವಹಾರಗಳನ್ನು ನಡೆಸಲಾಗುತ್ತಿದೆ. ಅಲ್ಲಿನ ಜನತೆ ಸಂಪೂರ್ಣವಾಗಿ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದೆ ಎಂದಿದ್ದಾರೆ. ಇದೇ ವೇಳೆ ಸ್ವಚ್ಛ ಭಾರತ ಅಭಿಯಾನದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿರುವುದಕ್ಕಾಗಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅವರಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ.

Comments are closed.