ಅಂತರಾಷ್ಟ್ರೀಯ

ಇರಾನ್ ರಾಜಧಾನಿ ತೆಹ್ರಾನ್ ನಲ್ಲಿ ಭೀಕರ ರೈಲು ದುರಂತ : 44 ಮಂದಿ ಸಾವು

Pinterest LinkedIn Tumblr

iran_train_crash

ತೆಹ್ರಾನ್: ಇರಾನ್ ರಾಜಧಾನಿ ತೆಹ್ರಾನ್ ನಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು, ದುರಂತದಲ್ಲಿ ಈ ವರೆಗೂ ಕನಿಷ್ಠ 44 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇರಾನ್ ನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ ತೆಹ್ರಾನ್ ನ 150 ಕಿ.ಮೀ ದೂರದಲ್ಲಿ ರೈಲು ದುರಂತ ಸಂಭವಿಸಿದ್ದು, ಹಳಿ ತಪ್ಪಿದ ರೈಲು ನೇರ ಸಮೀಪದ ಹಫ್ತ್ ಖಾನ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಮೂರು ಬೋಗಿಗಳಿಗೆ ಬೆಂಕಿ ಹೊತ್ತಿದ್ದು, ಪರಿಣಾಮ ಸುಮಾರು 44 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ 103 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಸೈನಿಕ ಆಸ್ಪತ್ರೆಗೆ ರಾವಾನಿಸಲಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ಹೊತ್ತಿರುವ ಬೋಗಿಗಳನ್ನು ನಂದಿಸುತ್ತಿದ್ದಾರೆ. ದುರಂತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರಂಭದಲ್ಲಿ ಎಲ್ಲರೂ ಇದನ್ನು ವಾಯುದಾಳಿಯಾಗಿರಬಹುದು ಎಂದು ಶಂಕಿಸಿದ್ದರಾದರೂ ಬಳಿಕ ಇದು ರೈಲು ಅಪಘಾತ ಎಂದು ಸ್ಪಷ್ಟವಾಗಿದೆ.

Comments are closed.