ಅಂತರಾಷ್ಟ್ರೀಯ

ದಕ್ಷಿಣ ಕೊರಿಯಾ ಅಧ್ಯಕ್ಷರ ಕಚೇರಿ ನೌಕರರಿಗಾಗಿ 360 ವಯಾಗ್ರ ಮಾತ್ರೆಗಳನ್ನು ತರಿಸಿಕೊಂಡಿದೆ ! ಏಕೆ ಗೊತ್ತಾ..?

Pinterest LinkedIn Tumblr

vayagra

ದಕ್ಷಿಣ ಕೊರಿಯಾ ಅಧ್ಯಕ್ಷರ ಕಚೇರಿ ತನ್ನ ನೌಕರರಿಗಾಗಿ 360 ವಯಾಗ್ರ ಮಾತ್ರೆಗಳನ್ನು ತರಿಸಿಕೊಂಡಿದೆ ಮತ್ತು ಈ ಕುರಿತು ಸ್ವತಃ ಕಚೇರಿಯೇ ದೃಢಪಡಿಸಿದೆ. ಆದರೆ ಈ ಮಾತ್ರೆಗಳನ್ನು ತರಿಸಿಕೊಂಡಿರುವ ಕಾರಣ ಮಾತ್ರ ವಿಚಿತ್ರವಾಗಿದೆ.

ಅಧ್ಯಕ್ಷರ ಸಹಾಯಕರಿಗೆ ಎತ್ತರದ ಪ್ರದೇಶಗಳಲ್ಲಿ ಉಂಟಾ ಗುವ ಮಾನಸಿಕ ಕ್ಷೋಭೆ ನಿವಾರಿಸಲು ಈ ಮಾತ್ರೆಗಳನ್ನು ಅವರು ಬಳಸುತ್ತಾರಂತೆ. ಅಧ್ಯಕ್ಷೆ ಪಾರ್ಕ್‌ ಜೆಯುನ್‌ ಹೇಯ್‌ ಉಗಾಂಡ, ಇಥಿಯೋಪಿಯಾ ಮತ್ತು ಕೀನ್ಯಾ ದೇಶಗಳಿಗೆ ಪ್ರವಾಸ ಮಾಡುವರು. ಆ ದೇಶಗಳು ಸಮುದ್ರ ಮಟ್ಟಕ್ಕಿಂತ ಸುಮಾರು 1,000 ಅಡಿ ಎತ್ತರದಲ್ಲಿವೆ. ಆಗ ಸಿಬ್ಬಂದಿಗಳು ಎತ್ತರದ ಖಾಯಿಲೆಯಿಂದ ಬಳಲುವರು. ಈ ಮಾತ್ರೆಗಳನ್ನು ಅವರಿಗೆ ನೀಡುವ ಸಲುವಾಗಿ ತರಿಸಲಾಗಿದೆ ಎಂದು ಕಚೇರಿ ಹೇಳಿದೆ. ಈ ಸಂಬಂಧ ದಕ್ಷಿಣ ಕೊರಿಯಾ ಅಧ್ಯಕ್ಷರನ್ನು ಜಾಲತಾಣಗಳಲ್ಲಿ ಭಾರಿ ಗೇಲಿ ಮಾಡಲಾಗುತ್ತಿದೆ. ಸದ್ಯ ದೊಡ್ಡದೊಂದು ಹಗರಣದಲ್ಲಿ ಪಾರ್ಕ್‌ ಸಿಲುಕಿರುವಾಗಲೇ ಈ ಸುದ್ದಿ ಬಹಿರಂಗವಾಗಿದ್ದು, ವಿರೋಧಿಗಳ ಪಾರ್ಕ್‌ರನ್ನು ಅಪಹಾಸ್ಯಕ್ಕೆ ಗುರಿ ಮಾಡಿದ್ದಾರೆ.

Comments are closed.