ಅಂತರಾಷ್ಟ್ರೀಯ

2000-500 ಹೊಸ ನೋಟುಗಳ ವಿನಿಮಯಕ್ಕೆ ನೇಪಾಳ ತಡೆ

Pinterest LinkedIn Tumblr

2000-rs-new-note-vertಕಠ್ಮಂಡು: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ಹೊಸ ಅಧಿಸೂಚನೆ ಪ್ರಕಟಿಸುವವರೆಗೂ ರದ್ದುಗೊಂಡಿರುವ 500 ಮತ್ತು 1000 ಮುಖಬೆಲೆಯ ನೋಟುಗಳ ಬದಲಾವಣೆ ಮಾಡಲು ನೇಪಾಳ ಸರ್ಕಾರ ಬ್ರೇಕ್ ಹಾಕಿದೆ.
ಭಾರತದಲ್ಲಿ ರದ್ದುಗೊಂಡಿರುವ 500-1000 ನೋಟುಗಳ ಹಿಂಪಡೆದು 2000 ಮತ್ತು 500ರ ಹೊಸ ನೋಟುಗಳ ವಿನಿಮಯವನ್ನು ನೇಪಾಳದ ಕೇಂದ್ರ ಬ್ಯಾಂಕ್ ರದ್ದುಪಡಿಸಿದೆ. ಭಾರತ ಮತ್ತು ನೇಪಾಳ ಗಡಿ ಸಂಚಾರ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಭಾರತದ ಹೊಸ ನೋಟುಗಳು ಬಹುಬೇಗ ನೇಪಾಳ ಮಾರುಕಟ್ಟೆಯನ್ನು ಪ್ರವೇಶಿಸಿವೆ.
ಆರ್ಬಿಐ ಅನುಮತಿಯಂತೆ ಒಬ್ಬ ನೇಪಾಳಿ 25 ಸಾವಿರ ರುಪಾಯಿ ಇಟ್ಟುಕೊಳ್ಳಬಹುದಾಗಿದ್ದು ಇಷ್ಟು ಮೊತ್ತದ ಹಳೆಯ ನೋಟುಗಳನ್ನು ಬದಲಿಸುವುದು ಕಷ್ಟದ ಕೆಲಸವಾಗಿದೆ.

Comments are closed.