ಅಂತರಾಷ್ಟ್ರೀಯ

ಭಾರತದಲ್ಲಿ ಜಪಾನಿ ಕೈಗಾರಿಕೆಗೆ ಮೋದಿ ಸ್ವಾಗತ

Pinterest LinkedIn Tumblr

modi1

ಕೊಬೆ (ಜಪಾನ್): ಭಾರತದಲ್ಲಿ ಉದ್ಯಮ ಸ್ಥಾಪನೆ ಪಾಲುದಾರಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಪ್ರಧಾನಿ ಮೋದಿ ಇಂದು ಜಪಾನ್ ಉದ್ಯಮ ವಲಯವನ್ನು ಕೋರಿದ್ದಾರೆ.

ಉದ್ಯಮಪತಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಭಾರತದಲ್ಲಿ ಉದ್ಯಮ ಸ್ಥಾಪನೆಯಲ್ಲಿ ಪಾಲುದಾರರಾಗುವುದರಿಂದ ಭಾರತ, ಜಪಾನ್ ಎರಡೂ ರಾಷ್ಟ್ರಗಳಿಗೆ ಇದರಿಂದ ಲಾಭವಿದೆ ಎಂದರು.

ಪ್ರಧಾನಿ ಮೋದಿಯವರು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಶಿಂಕನ್ ಸೆನ್ ಬುಲೆಟ್ ರೈಲಿನಲ್ಲಿ ಇಲ್ಲಿಗೆ ಆಗಮಿಸಿದ್ದರು.

ಪ್ರಧಾನಿ ಅವರನ್ನು ಹುಯ್‌ಗೊ ರಾಜ್ಯಪಾಲ ಟೊಶಿಂಜೊ ಇಡೋ ಮತ್ತು ಕೊಬೆ ಮೇಯರ್ ಕ್ಯುಜೊ ಹಿಸಮೋಟೊ ಸ್ವಾಗತಿಸಿದರು. ಸರ್ಕಾರಿ ಅತಿಥಿ ಗೃಹದಲ್ಲಿ ಪ್ರಧಾನ ಗೌರವಾರ್ಥ ಭೋಜನ ಕೂಟ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಜಪಾನ್ ಉದ್ಯಮಪತಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತದಲ್ಲಿ ಉದ್ಯಮ ಸ್ಥಾಪಿಸಲು ಕೋರಿದ್ದರು. ಇದೇ ವೇಳೆ ಹ್ಯೂಗೈ ಮತ್ತು ಗುಜರಾತ್ ನಡುವೆ ಹಲವು ಕ್ಷೇತ್ರಗಳಲ್ಲಿ ವಾಣಿಜ್ಯ ವ್ಯವಹಾರ ಕುರಿತಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.