ಅಂತರಾಷ್ಟ್ರೀಯ

ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಭಾರತ– ಜಪಾನ್‌ ಸಹಿ

Pinterest LinkedIn Tumblr

modi-abee-fiಟೋಕಿಯೊ: ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಭಾರತ ಮತ್ತು ಜಪಾನ್‌ ಶುಕ್ರವಾರ ಸಹಿ ಹಾಕಿವೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೊ ಅಬೆ ನಡುವಿನ ದ್ವಿಪಕ್ಷೀಯ ಮಾತುಕತೆಯ ಬಳಿಕ ಈ ಮಹತ್ವದ ಒಪ್ಪಂದಕ್ಕೆ ಸಹಿ ಬಿದ್ದಿದೆ.

ಅಬೆ ಅವರು ಕಳೆದ ಡಿಸೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ವೇಳೆ ಈ ಕುರಿತ ವಿಸ್ತೃತ ಒಪ್ಪಂದಕ್ಕೆ ಬಂದಿದ್ದವು. ಈ ಒಪ್ಪಂದದಿಂದ ಜಪಾನ್‌ ಭಾರತದೊಂದಿಗೆ ಪರಮಾಣು ತಂತ್ರಜ್ಞಾನ ಹಂಚಿಕೊಳ್ಳಲಿದೆ.

‘ಸ್ವಚ್ಛ ಜಗತ್ತಿಗಾಗಿ ಒಂದು ಐತಿಹಾಸಿಕ ಒಪ್ಪಂದವಾಗಿದೆ! ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಂಜೊ ಅಬೆ ಅವರು ಮಹತ್ವದ ನಾಗರಿಕ ಪರಮಾಣು ಒಪ್ಪಂದಕ್ಕೆ ಸಾಕ್ಷಿಯಾಗಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ವಿಕಾಸ್‌ ಸ್ವರೂಪ್‌ ಟ್ವೀಟ್‌ ಮಾಡಿದ್ದಾರೆ.

Comments are closed.