ಅಂತರಾಷ್ಟ್ರೀಯ

ನವದೆಹಲಿಯಿಂದ ದೋಹಾಕ್ಕೆ ಹೊರಟಿದ್ದ ಜೆಟ್ ಏರ್ವೇಸ್’ನಲ್ಲಿ ಪ್ರಯಾಣಿಕ ಸಾವು; ಕರಾಚಿಯಲ್ಲಿ ಇಳಿದ ವಿಮಾನ

Pinterest LinkedIn Tumblr

jet-airways-pakistan

ಕರಾಚಿ: ಪ್ರಯಾಣಿಕರೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದಕ್ಕೆ ಜೆಟ್ ಏರ್ವೇಸ್ ವಿಮಾನ ಕರಾಚಿ ವಿಮಾನನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದೆ. ಪಾಕಿಸ್ತಾನಿ ವೈದ್ಯರು ಪ್ರಯಾಣಿಕ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಕರಾಚಿಯಲ್ಲಿ ವಿಮಾನವನ್ನು ಇಳಿಸಲು ಪೈಲಟ್ ಪರವಾನಗಿ ಪಡೆದರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಸೋಹನ್ ಸಿಂಗ್ ಎಂದು ಗುರುತಿಸಲಾಗಿರುವ ಪ್ರಯಾಣಿಕನ ವೈದ್ಯಕೀಯ ಪರೀಕ್ಷೆ ನಡೆಸಿದ ಪಾಕಿಸ್ತಾನಿ ವೈದ್ಯರು ವಿಮಾನ ಇಳಿಯುವ ಹೊತ್ತಿಗೆ ಅವರು ಮೃತಪಟ್ಟಿರುವುದನ್ನು ಧೃಢೀಕರಿಸಿದ್ದಾರೆ.

ಏರ್ಲೈನ್ಸ್ ತಿಳಿಸಿರುವ ಪ್ರಕಾರ ನವದೆಹಲಿಯಿಂದ ದೋಹಾ ಕಡೆಗೆ ಹೊರಟಿದ್ದ 9W 202 ಕರಾಚಿಯಲ್ಲಿ ಭೂಸ್ಪರ್ಶ ಮಾಡಿತ್ತು ಎಂದು ತಿಳಿಸಿದೆ. ಈ ವಿಮಾನ ಮಂಗಳವಾರ ಬೆಳಗ್ಗೆ ದೆಹಲಿಗೆ ಹಿಂದಿರುಗಿದೆ ಎಂದು ತಿಳಿಸಿದ್ದಾರೆ.

“ನಮ್ಮ ಅತಿಥಿಗಳಲ್ಲಿ ಒಬ್ಬರಿಗೆ ಅನಾರೋಗ್ಯದ ಲಕ್ಷಣಗಳು ಕಂಡುಬಂದದ್ದರಿಂದ, ತುರ್ತಾಗಿ ಹತ್ತಿರದ ವಿಮಾನನಿಲ್ದಾಣದಲ್ಲಿ ಇಳಿಸಲು ವಿಮಾನದ ಕ್ಯಾಪ್ಟನ್ ನಿರ್ಧರಿಸಿದರು” ಎಂದು ಏರ್ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

“ವಿಮಾನ ಇಳಿಯುವುದಕ್ಕೂ ಮುಂಚಿತವಾಗಿ ಅಗತ್ಯವಾದ ಪ್ರಥಮ ಚಿಕಿತ್ಸೆ ನೀಡಲಾಯಿತು. ಹೀಗಿದ್ದೂ, ಕರಾಚಿಯಲ್ಲಿ ಇಳಿಯುವ ವೇಳೆಗೆ ಅವರು ಮೃತಪಟ್ಟರು” ಎಂದು ಏರ್ಲೈನ್ಸ್ ಹೇಳಿಕೆಯಲ್ಲಿ ತಿಳಿಯಿಸದೆ. ಬೋಯಿಂಗ್ 737 ವಿಮಾನದಲ್ಲಿ 141 ಜನ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದೆ.

Comments are closed.