ಅಂತರಾಷ್ಟ್ರೀಯ

ಕಾಶ್ಮೀರ ಹಿಂಸಾಚಾರದ ಬಗ್ಗೆ ತಣ್ಣನೆ ಪ್ರತಿಕ್ರಿಯೆ, ಪಾಕ್ ಗೆ ಹಫೀಜ್ ಸಯೀದ್ ತರಾಟೆ

Pinterest LinkedIn Tumblr

hafeezಲಾಹೋರ: ಕಾಶ್ಮೀರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಾಂತ ಪ್ರತಿಕ್ರಿಯೆ ನೀಡುತ್ತಿರುವ ಪ್ರಧಾನಿ ನವಾಜ್ ಷರೀಫ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮುಂಬೈ ದಾಳಿಯ ರೂವಾರಿ, ಜಾಮಾತ್ ಉದ್ ದಾವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್, ಕಣಿವೆ ರಾಜ್ಯದ ಜನತೆಗೆ ಪಾಕಿಸ್ತಾನದ ಸಂಪೂರ್ಣ ಪ್ರಾಯೋಗಿಕ ಬೆಂಬಲದ ಅಗತ್ಯ ಇದೆ ಎಂದಿದ್ದಾನೆ.
ಜೆಯುಡಿಯ ಮುಖ್ಯ ಕಚೇರಿಯಲ್ಲಿ ಶುಕ್ರವಾರದ ಧರ್ಮೋಪದೇಶದ ವೇಳೆ ಹಫೀಜ್ ಸಯೀದ್, ಕಾಶ್ಮೀರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಶಾಂತಿಯುತವಾಗಿ ಪ್ರತಿಕ್ರಿಯೆ ತೋರುತ್ತಿದ್ದು, ಕಾಶ್ಮೀರ ಸಂತ್ರಸ್ಥರ ನೋವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಸರ್ಕಾರ ಇತರೆ ಸಚಿವರು ಕಾಶ್ಮೀರ ಪರವಾಗಿ ಕೇವಲ ಒಂದೇರಡು ಹೇಳಿಕೆ ನೀಡಿದರೆ ಅದಕ್ಕೆ ಯಾವುದೇ ಬೆಲೆ ಇರಲ್ಲ. ಅವರಿಗೆ ಸಂಪೂರ್ಣ ಬೆಂಬಲದ ಅಗತ್ಯ ಇದೆ ಎಂದು ಹೇಳಿದ್ದಾನೆ.

Comments are closed.