ಅಂತರಾಷ್ಟ್ರೀಯ

ಫೇಸ್‍ಬುಕ್ ಪೋಸ್ಟ್ ನಿಂದಾಗಿ ಬಾಂಗ್ಲಾದಲ್ಲಿ 15 ಹಿಂದೂ ದೇವಾಲಯಗಳು ನಾಶ

Pinterest LinkedIn Tumblr

facebook-depressionಢಾಕಾ: ಭಾರತದಲ್ಲಿನ ಹಿಂದೂಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾ ದೀಪಾವಳಿಯನ್ನು ಆಚರಿಸುತ್ತಿದ್ದರೆ, ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಫೇಸ್‍ಬುಕ್ ಪೋಸ್ಟ್ ನಿಂದಾಗಿ ಕೋಮುಗಲಭೆ ನಡೆದು 15 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ.

ಕಿಡಿಗೇಡಿಯೊಬ್ಬ ಫೇಸ್‍ಬುಕ್‍ನಲ್ಲಿ ಮುಸ್ಲಿಮರ ಪವಿತ್ರ ಸ್ಥಳವಾದ ಮಸ್ಜೀದ್-ಅಲ್-ಹರಮ್ ಬಗ್ಗೆ ಬರೆದು ವಿಡಂಬನೆ ಮಾಡಿದ್ದ. ಇದರಿಂದ ಕೋಮುಗಲಾಟೆ ಸಂಭವಿಸಿ ಬ್ರಹ್ಮನಬರಿಯಾ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ದೇವಾಲಯ ಮತ್ತು ನೂರಕ್ಕೂ ಹೆಚ್ಚು ಹಿಂದೂ ಸಮುದಾಯದ ಮನೆಗಳನ್ನು ಧ್ವಂಸ ಮಾಡಿ, ಮನೆಗಳಲ್ಲಿನ ಸಂಪತ್ತನ್ನು ದೋಚಿದ್ದಾರೆ.

ರವಿವಾರ ಮಧ್ಯಾಹ್ನದ ಸಮಯದಲ್ಲಿ ಸುಮಾರು ನೂರು ಜನ ಬಂದೂಕು ದಾರಿಗಳು ಹಿಂದೂ ಸಮುದಾಯದ ಜನ ವಾಸವಿರುವ ಬ್ರಹ್ಮನಬರಿಯಾ ಜಿಲ್ಲೆಯ ನಾಸೀರ್‍ನಗರ ಉಪಜಿಲ್ಲೆಯಲ್ಲಿ ಆಕ್ರಮಣ ಮಾಡಿ ಕ್ರೌರ್ಯವನ್ನು ಮೆರೆದಿದ್ದಾರೆ. ನಂತರದಲ್ಲಿ ನೆರೆಯ ಹಭೀಗಂಜ್ ನಗರದ ಮಾಧಪುರದಲ್ಲಿಯ ಎರಡು ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಾರೆ.

ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಿನ್ನಲೆಯಲ್ಲಿ 1 ಸಾವಿರ ಜನರ ವಿರುದ್ಧ ಕೇಸ್ ಹಾಕಲಾಗಿದೆ. ದಾಳಿಕೋರರು ಎಂಟು ಹಿಂದೂ ಪ್ರದೇಶಗಳಾದ ಕಾಶಿಪುರ, ದಾಸ್ಪರಾ, ದತ್ತಾಪುರ, ಘೋಷ್ಪರಾ ಮತ್ತು ನೋಮೊಶುದ್ರೊಪುರಗಳಲ್ಲಿ ದಾಳಿ ಮಾಡಿದ್ದಾರೆ ಎಂದು ನಾಸಿರ್‍ನಗರ ಪೋಲಿಸ್ ಠಾಣೆಯ ಅಧಿಕಾರಿ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಢಾಕಾ ನಗರದಲ್ಲಿ ಅಂದಾಜು 150 ರಿಂದ 200 ಜನ ಏಳು ದೇವಸ್ಥಾನಗಳನ್ನು ಮತ್ತು ಸುತ್ತಲಿನ ಪ್ರದೇಶವನ್ನು ನಾಶಗೊಳಿಸಿದ್ದಾರೆ. ಎಂದು ಬ್ರಹ್ಮನಬರಿಯಾದ ಎಸ್‍ಪಿ ಮಿಜ್‍ನೂರ್ ರೆಹಮಾನ್ ಹೇಳಿದ್ದಾರೆ.

ಈ ದಾಳಿಯಲ್ಲಿ ಹಿಂದೂಗಳ ಪ್ರಾಚೀನ ದೇವಸ್ಥಾನಗಳು ನಾಶವಾಗಿವೆ. ಅವುಗಳಲ್ಲಿ ದುತ್ತೋಬರಿ ದೇವಸ್ಥಾನ, ನೋಮೊಶುದ್ರೊಪುರಾ ದೇವಸ್ಥಾನ, ಜಗನ್ನಾಥ್ ದೇವಸ್ಥಾನ, ಘೋಷ್ಪಾರಾ ದೇವಸ್ಥಾನ, ಗೌರೋ ದೇವಸ್ಥಾನಗಳನ್ನು ದಾಳಿಕೋರರು ನಾಶ ಮಾಡಿದ್ದಾರೆ. ದಾಳಿಯ ವೇಳೆಯಲ್ಲಿ ದೇವಸ್ಥಾನದ ಅರ್ಚಕರಿಗೆ ಕೆಲವು ಸಣ್ಣ ಪುಟ್ಟ ಗಾಯಗಳಾಗಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಎಸ್‍ಪಿ ಮಿಜ್‍ನೂರ್ ರೆಹಮಾನ್ ತಿಳಿಸಿದ್ದಾರೆ.

ರಾಸ್‍ರಾಜ್ ಎನ್ನುವ ವ್ಯಕ್ತಿ ತನ್ನ ಫೇಸ್‍ಬುಕ್‍ನಲ್ಲಿ ಮುಸ್ಲಿಂರ ಪವಿತ್ರ ಸ್ಥಳದ ಬಗ್ಗೆ ಪೋಸ್ಟ್ ಮಾಡಿದ್ದನು. ರಾಸ್‍ರಾಜ್ ಹರಿನ್‍ಬೇರಂ ಗ್ರಾಮದ ನಿವಾಸಿಯಾಗಿದ್ದಾನೆ. ಈ ಪೋಸ್ಟ್ ಹಿನ್ನಲೆಯಲ್ಲಿ ರಾಸ್‍ರಾಜ್‍ನ್ನು ಕೋರ್ಟ್ ಆದೇಶದ ಮೇರೆಗೆ ಪೋಲಿಸರು ಶುಕ್ರವಾರವೇ ಬಂಧಿಸಿದ್ದರು.

Comments are closed.