ಅಂತರಾಷ್ಟ್ರೀಯ

ಮುಖದಲ್ಲಿ ಮೊಡವೆ ಮೂಡಲು ಆಮ್ಲಜನಕದ ಕೊರತೆ ಕಾರಣ …ಗೋತ್ತೆ!

Pinterest LinkedIn Tumblr

pimple

ನ್ಯೂಯಾರ್ಕ್: ಮೊಡವೆ ಏಕೆ ಬರುತ್ತದೆ ಎಂಬ ಪ್ರಶ್ನೆಗೆ ಹೊಸ ಅಧ್ಯಯನವೊಂದು ಉತ್ತರ ಕಂಡುಕೊಂಡಿದೆ. ಮೊಡವೆ ಹಾಗೂ ಇತರ ಕೆಲ ಚರ್ಮದ ಸೋಂಕಿಗೆ ಕಾರಣವಾಗುವ ಪ್ರೋಪಿಯೋನಿಬ್ಯಾಕ್ಟೀರಿಯಮ್ ಏಕ್ನಿಸ್’ಗೆ ಆಮ್ಲಜನಕದ ಕೊರತೆ ಉಂಟಾದಾಗ ಮೊಡವೆಗಳಾಗುತ್ತವೆ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ.

ಈ ಬ್ಯಾಕ್ಟೀರಿಯಾಗಳು ನಮ್ಮ ಚರ್ಮದ ಮೇಲೆ ಯಾವಾಗಲೂ ಇರುತ್ತವಾದರೂ ಸಾಮಾನ್ಯವಾಗಿ ನಿರುಪದ್ರವಿಗಳಾಗಿರುತ್ತವೆ.

ಆದರೆ, ಚರ್ಮದ ಕೋಶಗಳು ಹಾಗೂ ಕೂದಲಿನಲ್ಲಿ ಗಾಳಿ ಆಡದ ಸ್ಥಿತಿ ನಿರ್ಮಾಣವಾದಾಗ ಈ ಬ್ಯಾಕ್ಟೀರಿಯಾಗಳು ರೊಚ್ಚಿಗೇಳುತ್ತವೆ. ನಮ್ಮ ಚರ್ಮದಲ್ಲಿ ಕಂಡುಬರುವ ಸಿರಮ್ ಎಂಬ ಎಣ್ಣೆಯನ್ನು ಈ ಬ್ಯಾಕ್ಟೀರಿಯಾ ಫ್ಯಾಟಿ ಆಸಿಡ್’ಗಳಾಗಿ ಪರಿವರ್ತಿಸುತ್ತದೆ. ಇದರೊಂದಿಗೆ ಹತ್ತಿರದ ಚರ್ಮ ಕೋಶಗಳು ಊದಿಕೊಳ್ಳುತ್ತವೆ. ದೇಹದಲ್ಲಿರುವ ಹಿಸ್ಟೋನ್ಸ್ ಎಂಬ ಗ್ರಂಥಿಗಳು ಈ ಊತವನ್ನು ಕಡಿಮೆ ಮಾಡಲು ಸ್ವಾಭಾವಿಕವಾಗಿ ಯತ್ನಿಸುತ್ತವಾದರೂ ಬ್ಯಾಕ್ಟೀರಿಯಾಗಳು ಉತ್ಪಾದಿಸುವ ಫ್ಯಾಟಿ ಆಸಿಡ್’ಗಳ ಮುಂದೆ ಅವುಗಳ ಆಟ ಸಾಗುವುದಿಲ್ಲ. ಹೀಗಾಗಿ, ಊತ ಕಡಿಮೆ ಆಗುವುದಿಲ್ಲ. ಚರ್ಮದ ಮೇಲೆ ತುರಿಕೆ ತರುವಂತಹ ಕೆಂಪಗಿನ ಗುಳ್ಳೆಗಳೇಳುತ್ತವೆ.

ಅಮೆರಿಕದ ಸ್ಯಾನ್ ಡಿಯೆಗೋದಲ್ಲಿರುವ ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರು ಈ ಹೊಸ ವಿಚಾರವನ್ನು ಪತ್ತೆ ಹಚ್ಚಿದ್ದಾರೆ. ಮೊಡವೆಯ ಚಿಕಿತ್ಸೆಗೆ ಈ ಅಧ್ಯಯನ ಸಹಕಾರ ಆಗುವ ನಿರೀಕ್ಷೆ ಇದೆ.

Comments are closed.