ಅಂತರಾಷ್ಟ್ರೀಯ

ವಿಶ್ವಸಂಸ್ಥೆಯಲ್ಲಿ ಪ್ರಥಮ ಬಾರಿ ದೀಪಾವಳಿ ಆಚರಣೆ

Pinterest LinkedIn Tumblr

diwaliವಿಶ್ವಸಂಸ್ಥೆ: ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆಯ ಮುಖ್ಯ ಕಚೇರಿಯ ಕಟ್ಟಡದ ಮೇಲೆ ‘ಹ್ಯಾಪಿ ದಿವಾಲಿ’(‘Happy Diwali’) ಎಂಬ ಅಕ್ಷರಗಳು ಅದರ ಮೇಲೆ ಬೆಳಗುವ ದೀಪದ ಚಿತ್ರ ಜಗಮಗಿಸಿದೆ. ಈ ಮೂಲಕ ಭಾರತೀಯ ಪರಂಪರೆಯ ದೀಪಾವಳಿಯನ್ನು ವಿಶ್ವಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಆಚರಿಸಲಾಗಿದೆ.

ದೀಪಾವಳಿ ಜ್ಞಾಪಕಾರ್ಥವಾಗಿ ಪ್ರಥಮ ಬಾರಿಗೆ ಮುಖ್ಯ ಕಚೇರಿ ಕಟ್ಟಡಕ್ಕೆ ದೀಪ ಬೆಳಗಿದೆ. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಸಾಂಪ್ರದಾಯಿಕ ಹಬ್ಬ ‘ದೀಪಾವಳಿ ಮಹತ್ವ’ ಕುರಿತು ಅಂಗೀಕಾರವಾದ ಬಳಿಕ ಪ್ರಥಮಬಾರಿಗೆ ಆಚರಿಸಲಾಗುತ್ತಿದೆ.

ವಿಶ್ವಸಂಸ್ಥೆ ಪ್ರಥಮ ಬಾರಿ ದೀಪಾವಳಿ ಬೆಳಕು ಬೆಳಗಿಸಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸಯ್ಯದ್‌ ಅಕ್ಬರುದ್ದೀನ್‌ ಟ್ವೀಟ್‌ ಮಾಡಿದ್ದಾರೆ.

‘ಕತ್ತಲೆ ಮೇಲೆ ಬೆಳಕು, ಹತಾಶೆ ಮೇಲೆ ಭರವಸೆ, ಅಜ್ಞಾನದ ಮೇಲೆ ಜ್ಞಾನ, ದುಷ್ಟತನದ ಮೇಲೆ ಒಳಿತನ್ನು ವಿಶ್ವಸಂಸ್ಥೆ ಬೆಳಗಿಸುತ್ತದೆ. ದೀಪಾವಳಿಯ ಶುಭಾಶಯಗಳು’ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಪೀಟರ್‌ ಥಾಮಸ್‌ ಟ್ವೀಟ್‌ ಮಾಡಿದ್ದಾರೆ.

Comments are closed.