ಬೀಜಿಂಗ್: ಒಂದೆಡೆ ಭಾರತದಲ್ಲಿ ಚೀನಾ ಸರಕು ಬಹಿಷ್ಕಾರಕ್ಕೆ ಕರೆ ನೀಡಲಾಗಿದ್ದರೆ, ಮತ್ತೊಂದೆಡೆ ಭಾರತದಲ್ಲಿ ಹೂಡಿಕೆ ಮಾಡುವುದು ಚೀನಾ ಬಂಡವಾಳಕ್ಕೆ ಒಳ್ಳೆಯದು ಎಂದು ಚೀನಾ ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ಹೂಡಿಕೆ ಮಾಡಿದರೆ ಚೀನಾ ಬಂಡವಾಳಕ್ಕೆ ಒಳ್ಳೆಯದಾಗಲಿದೆ ಎಂಬುದಕ್ಕೆ ಹಲವಾರು ಕಾರಣಗಳಿದ್ದು, ಬಂಡವಾಳ ಲಾಭವಾಗಿ ಪರಿವರ್ತನೆಯಾಗಲಿದೆ ಎಂದು ಚೀನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕೆ ಹೊರಗಿನಿಂದ ಹರಿದುಬರುತ್ತಿರುವ ವಿದೇಶಿ ನೇರ ಬಂಡವಾಳ ಹೂಡಿಕೆ, ಭಾರತಕ್ಕೆ ಲಾಭ ಮಾಡಿಕೊಡಲು ಯತ್ನಿಸುವುದಿಲ್ಲ, ಆದರೆ ಭಾರತದ ಆರ್ಥಿಕತೆ ಬೆಳವಣಿಗೆ ಹಾಗು ಅನುಕೂಲಕರ ನೀತಿಗಳಿಂದ ಹೂಡಿಕೆದಾರರಲ್ಲಿ ಲಾಭದ ಬಗ್ಗೆ ಭರವಸೆಯನ್ನು ನೀಡುತ್ತವೆ ಎಂದು ಚೀನಾ ಆರ್ಥಿಕ ತಜ್ಞರೊಬ್ಬರು ಅಲ್ಲಿನ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಬರೆದಿದ್ದಾರೆ.
ಭಾರತ ಹೂಡಿಕೆ ಸ್ನೇಹಿ ವಾತಾವರಣವನ್ನು ಸುಧಾರಣೆ ಮಾಡುತ್ತಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಗಳನ್ನು ನರೇಂದ್ರ ಮೋದಿ ಸರ್ಕಾರ ಬದಲಾವಣೆ ಮಾಡಿದ್ದು, ಭಾರತದ ಉತ್ಪಾದನಾ ಅಭಿವೃದ್ಧಿಯನ್ನು ಸೀಮಿತಗೊಳಿಸುವ ಸಾಮರ್ಥ್ಯ ಚೀನಾಗೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂತರಾಷ್ಟ್ರೀಯ
Comments are closed.