ಅಂತರಾಷ್ಟ್ರೀಯ

ಪಾಕಿಸ್ತಾನದ ಅಣೆಕಟ್ಟೆ ಯೋಜನೆಗೆ ಸಹಕಾರ ನಿರಾಕರಿಸಿದ ಎಡಿಬಿ

Pinterest LinkedIn Tumblr

pokಇಸ್ಲಾಮಾಬಾದ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸಿಂಧೂ ನದಿಗೆ ಅಣೆಕಟ್ಟೆ ನಿರ್ಮಿಸುವ ಪಾಕಿಸ್ತಾನದ ಯೋಜನೆಗೆ ಹಣಕಾಸು ಸಹಕಾರ ನೀಡಲು ಏಷ್ಯಾ ಅಭಿವೃದ್ಧಿ ಬ್ಯಾಂಕ್‌(ಎಡಿಬಿ) ನಿರಾಕರಿಸಿದೆ.

ಭಾರತದಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಲು ಪಾಕಿಸ್ತಾನ ನಿರಾಕರಿಸಿದ ಹಿನ್ನೆಲೆಯಲ್ಲಿ ₹93 ಸಾವಿರ ಕೋಟಿ(14 ಬಿಲಿಯನ್‌ ಡಾಲರ್‌) ಯೋಜನೆಗೆ ಹಣಕಾಸು ನೆರವು ನೀಡಲು ಎರಡು ವರ್ಷಗಳ ಹಿಂದೆ ವಿಶ್ವ ಬ್ಯಾಂಕ್‌ ತಿರಸ್ಕರಿಸಿತ್ತು.

ಇದು ಬೃಹತ್‌ ಯೋಜನೆಯಾಗಿದ್ದು, ಸಹಕಾರ ನೀಡುವ ವಚನ ನೀಡಲಾಗುವುದಿಲ್ಲ ಎಂದು ಮಧ್ಯ ಏಷ್ಯಾ ಪ್ರಾದೇಶಿಕ ಆರ್ಥಿಕ ಸಹಕಾರ(ಸಿಎಆರ್‌ಇಸಿ) ಕಾರ್ಯಕ್ರಮದ 15ನೇ ಸಚಿವರ ಸಭೆಯಲ್ಲಿ ಬುಧವಾರ ಎಡಿಬಿ ಅಧ್ಯಕ್ಷ ತಾಕಿಹಿಕೋ ನಕಾವೋ ಹೇಳಿದ್ದಾರೆ. ಈ ಯೋಜನೆ ಮೂಲಕ 4,500 ಮೆ.ವ್ಯಾ ವಿದ್ಯುತ್‌ ಉತ್ಪಾದನೆಯ ಸಾಧ್ಯತೆಯಿದೆ.

Comments are closed.