ನ್ಯೂಯಾರ್ಕ್: ಸ್ಯಾಮ್ಂಗ್ ಗ್ಯಾಲಕ್ಸಿ ನೋಟ್ 7 ಅಸುರಕ್ಷಿತ ಎಂಬ ಹಿನ್ನೆಲೆಯಲ್ಲಿ ಅವುಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಂಡ ಘಟನೆ ಇನ್ನೂ ಹಸಿ ಹಸಿಯಾಗಿರುವಾಗಲೇ ಅದರ ಬದಲಿಗೆ ಕಂಪನಿ ನೀಡಿದ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 7 ಎಜ್ ಕೂಡಾ ಸ್ಪೋಟಗೊಂಡಿರುವ ಘಟನೆ ಅಮೆರಿಕದಲ್ಲಿ ಘಟಿಸಿದೆ.
ಅಮೆರಿಕದ ಜನಪ್ರಿಯ ವೈರ್ಲೆಸ್ ಕ್ಯಾರಿಯರ್ ಮಳಿಗೆಗೆ ಹಾನಿಗೊಂಡಿದ್ದ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 7 ಎಜ್ ತೆಗೆದುಕೊಂಡು ಬಂದ ಗ್ರಾಹಕರೊಬ್ಬರು ಗ್ಯಾಲಕ್ಸಿ ನೋಟ್ 7 ಗೆ ಬದಲಿಯಾಗಿ ನೀಡಲಾದ ಗ್ಯಾಲಕ್ಸಿ ಎಸ್ 7 ಕೂರ್ಡಾ ಚಾರ್ಜ್ಗೆ ಇಟ್ಟಿದ್ದಾಗ ಸ್ಪೋಟಗೊಂಡಿದೆ ಎಂದು ದೂರಿದ್ದಾರೆ ಎಂದು ಫೋನ್ ಅರೆನಾ ವೆಬ್ ಸೈಟ್ ವರದಿ ಮಾಡಿದೆ.
ಸ್ಯಾಮ್ ಸಂಗ್ ಎಸ್ 7 ಇದೀಗ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಕೊರಿಯಾ ಕಂಪೆನಿಯ ಮೊಬೈಲ್ ಹ್ಯಾಂಡ್ಸೆಟ್ ಎಂಬ ಹೆಗ್ಗಳಿಕೆ ಹೊಂದಿದೆ.
ಗ್ಯಾಲಕ್ಸಿ ಎಸ್ 7 ಹ್ಯಾಂಡ್ ಸೆಟ್ನ್ನು ತಾನು ಎರಡು ವಾರಗಳ ಹಿಂದೆ ಪಡೆದಿದ್ದು, ಗ್ಯಾಲಕ್ಸಿ ನೋಟ್ 7 ಹ್ಯಾಂಡ್ ಸೆಟ್ಗೆ ಬದಲಾಗಿ ಇದನ್ನು ನೀಡಲಾಗಿತ್ತು ಎಂದು ಗ್ರಾಹಕರು ಪ್ರತಿಪಾದಿಸಿದ್ದಾರೆ. ಒಇಎಂ ಚಾರ್ಜರ್ (ನಿರ್ವಣಗಾರರ ಮೂಲ ಉಪಕರಣ) ಬಳಸಿ ರಾತ್ರಿ ಹ್ಯಾಂಡ್ ಸೆಟ್ ನ್ನು ಚಾರ್ಜ್ಗೆ ಹಾಕಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಕಳೆದ ತಿಂಗಳು ತನ್ನ ಗ್ಯಾಲಕ್ಸಿ ಎಸ್ 7 ಎಜ್ ಸ್ಪೋಟಗೊಂಡದ್ದನ್ನು ಅನುಸರಿಸಿ ಓಹಿಯೋದಲ್ಲಿ ಕಟ್ಟಡ ನಿರ್ಮಾಣ ಕಾರ್ವಿುಕರೊಬ್ಬರು ಕಂಪೆನಿ ವಿರುದ್ಧ ಖಟ್ಲೆ ಹೂಡಿದ್ದರು. ಸ್ಪೋಟದಿಂದ ಗ್ರಾಹಕ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವೆಬ್ ಸೈಟ್ ವರದಿ ತಿಳಿಸಿದೆ.