ರಾಷ್ಟ್ರೀಯ

ಈ ಭ್ರಷ್ಟ ರಸ್ತೆ ಸಾರಿಗೆ ಪ್ರಾಧಿಕಾರದ ಅಧಿಕಾರಿ ಬಳಿ ಸಿಕ್ಕಿದ ಚಿನ್ನಾಭರಣ-ನಗದು ಎಷ್ಟು ಗೊತ್ತಾ…?

Pinterest LinkedIn Tumblr

poornachandra-rao

ಹೈದರಾಬಾದ್: ರಸ್ತೆ ಸಾರಿಗೆ ಪ್ರಾಧಿಕಾರದ ಅಧಿಕಾರಿಯೊಬ್ಬರಿಗೆ ಸೇರಿದ ಏಳು ಅಪಾರ್ಟ್ವೆುಂಟ್ಗಳು, ಒಂದು ಮನೆ, ಇನ್ನೊಂದು ರೂಮ್ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬರೋಬ್ಬರಿ 60 ಕೆಜಿ ಬೆಳ್ಳಿ, ಒಂದು ಕೆಜಿ ಚಿನ್ನದ ಆಭರಣಗಳನ್ನು ಹಾಗೂ 20 ಲಕ್ಷ ನಗದು ರೂ.ವಶ ಪಡಿಸಿಕೊಂಡಿದ್ದಾರೆ. ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಸೋಮವಾರ ನಡೆದಿದ್ದು, ಇನ್ನಷ್ಟು ಶೋಧ ಕಾರ್ಯ ನಡೆದಿದೆ ಎಂದು ವರದಿಯಾಗಿದೆ.

34 ವರ್ಷಗಳ ಸೇವಾವಧಿಯಲ್ಲಿ ಇಷ್ಟೊಂದು ಆಸ್ತಿ ಹೇಗೆ ಸಾಧ್ಯವಾಯಿತು ಎನ್ನುವ ಲೆಕ್ಕಾಚಾರ ಇದೀಗ ಚರ್ಚೆಯ ವಿಷಯವಾಗಿದ್ದು, ಅಧಿಕಾರಿ ಅಕ್ರಮ ಆಸ್ತಿ ಹೊಂದಿದ್ದಾರೆ ಎನ್ನುವ ಆರೋಪದ ಮೇಲೆ ಹಠಾತ್ ದಾಳಿ ನಡೆಸಿದಾಗ ಇವೆಲ್ಲವೂ ಲಭ್ಯವಾಗಿವೆ ಎಂದು ಹೇಳಲಾಗಿದೆ.

ಪೂರ್ಣಚಂದ್ರ ರಾವ್ (55) ಗುಂಟೂರಿನಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರದ ಅಧಿಕಾರಿಯಾಗಿದ್ದು, 1981ರಲ್ಲಿ ಸೇವೆ ಆರಂಭಿಸಿದ್ದರು ಎನ್ನಲಾಗಿದೆ. ಗುಂಟೂರು, ಒಂಗೋಲೆ ಮತ್ತು ನೆಲ್ಲೋರ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ರಾವ್, 7 ಅಪಾರ್ಟ್ವೆುಂಟ್ಗಳನ್ನು, ವಿನುಕೊಂಡಾದಲ್ಲಿ ಎರಡು ಮನೆ, ಗುಂಟೂರಿನಲ್ಲಿ ಒಂದು ಮನೆ, ವಿಜಯವಾಡಾ ಮತ್ತು ಹೈದರಾಬಾದ್ನಲ್ಲಿ ತಲಾ ಎರಡು ಫ್ಲಾಟ್ಗಳನ್ನು ಹೊಂದಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದಲ್ಲದೆ ವಿನಿಕೊಂಡಾದಲ್ಲಿ ಒಂದು ಮಿಲ್ ಕೂಡ ನಡೆಸುತಿದ್ದಾರೆ ಎಂದು ಹೇಳಲಾಗಿದೆ.

ತನಿಖೆ ನಡೆಸಿರುವ ಅಧಿಕಾರಿಗಳು ಈಗಾಗಲೇ ಹೆಚ್ಚೂಕಡಿಮೆ 3 ಕೋಟಿ ರೂ. ಆಸ್ತಿಗೆ ಮುಟ್ಟುಗೋಲು ಹಾಕಿಕೊಂಡಿದ್ದು, ಇಂದಿನ ಮಾರುಕಟ್ಟೆ ಮೌಲ್ಯದ ಪ್ರಕಾರ 25 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಇದರಲ್ಲಿ ಅಕ್ರಮ ಆಸ್ತಿ ಎಷ್ಟಿವೆ ಎನ್ನುವುದರ ತನಿಖೆ ನಡೆಸುತ್ತಿದ್ದಾರೆ.

Comments are closed.