ಅಂತರಾಷ್ಟ್ರೀಯ

ಪಾಕ್ ನ ಹಿಂದೂ ದೇವಾಲಯಗಳಿಗೆ ವಿಶೇಷ ಭದ್ರತೆ

Pinterest LinkedIn Tumblr

pakಕರಾಚಿ: ಪಾಕಿಸ್ತಾನದಲ್ಲಿನ ಹಿಂದೂ ದೇವಾಲಯಗಳು, ಚರ್ಚ್, ಗುರುದ್ವಾರಗಳ ರಕ್ಷಣೆಗೆ
ಸಿಂಧ್ ಪ್ರಾಂತ್ಯದಲ್ಲಿ 400 ದಶಲಕ್ಷ ರೂಪಾಯಿಗಳ ಯೋಜನೆಯನ್ನು ಆರಂಭಿಸಲಾಗುವುದು ಎಂದು ಮಾಧ್ಯಮ ವರದಿಗಳು ಹೇಳಿವೆ.
ಸಿಂಧ್ ಪ್ರಾಂತ್ಯದಾದ್ಯಂತ ಇರುವ ಧಾರ್ಮಿಕ ಕ್ಷೇತ್ರಗಳಲ್ಲಿ ಕಣ್ಗಾವಲು ಕ್ಯಾಮರಾಗಳನ್ನು ಅಳವಡಿಸುವುದು ಮೊದಲಾದ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಇದು ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಧಾರ್ಮಿಕ ಸ್ಥಳಗಳಲ್ಲಿ ಭದ್ರತೆಯ ಕಾರಣಕ್ಕಾಗಿ ಈ ಯೋಜನೆಯನ್ನು ವಿಸ್ತಾರಗೊಳಿಸಲಾಗುತ್ತಿದೆ ಎಂದು ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿಯ ವಿಶೇಷ ಸಹಾಯಕಾಧಿಕಾರಿ ಖಟುಮಲ್ ಜೀವನ್ ಹೇಳುತ್ತಾರೆ.
ಆಧುನಿಕ ಕಣ್ಗಾವಲು ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರತಿ ಧಾರ್ಮಿಕ ಸ್ಥಳಗಳಲ್ಲಿ ಸ್ಥಾಪಿಸುವ ಯೋಜನೆಯಿದ್ದು, ಬಹು ವಿಡಿಯೋ ಕ್ಯಾಮೆರಾಗಳನ್ನು ನಿಯೋಜಿಸಲಾಗುತ್ತದೆ ಎಂದು ಡಾನ್ ವರದಿ ಮಾಡಿದೆ.
ಲರ್ಕಾನಾ, ಹೈದರಾಬಾದ್ ಮೊದಲಾದ ಸ್ಥಳಗಳಲ್ಲಿನ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿ ನಡೆದ ನಂತರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲ್ವಾಲ್ ಬುಟ್ಟೋ ಝರ್ದಾರಿಯವರ ನಿರ್ದೇಶನದ ಮೇರೆಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರಾದ ಹಿಂದೂ, ಸಿಖ್ ಮತ್ತು ಕ್ರಿಸ್ತಿಯನ್ನರಿಗೆ ಸಂಬಂಧಪಟ್ಟ ಸಾವಿರದ 253 ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಿಂದ್ ಪ್ರಾಂತ್ಯದ ಪೊಲೀಸರು ಸಂಗ್ರಹಿಸಿದ್ದಾರೆ. ಅವುಗಳಲ್ಲಿ 703 ಹಿಂದೂ ದೇವಸ್ಥಾನಗಳು, 523 ಚರ್ಚ್ ಗಳು ಇವೆ. ಇವುಗಳ ರಕ್ಷಣೆಗೆ ಒಟ್ಟು 2 ಸಾವಿರದ 310 ಪೊಲೀಸರು ಇದ್ದಾರೆ.

Comments are closed.