ಮುಂಬೈ: ದೀಪಾವಳಿಯಿಂದ ರೋಮಿಂಗ್ ಒಳಬರುವ ಕರೆಗಳನ್ನು ಉಚಿತಗೊಳಿಸಲಾಗಿದೆ ಎಂದು ವೋಡಾಫೋನ್ ಇಂಡಿಯಾ ಘೋಷಿಸಿದೆ.
ಇದರೊಂದಿಗೆ ವೋಡಾಫೋನ್ ಇಂಡಿಯಾ ಗ್ರಾಹಕರು ದೇಶದ ಯಾವುದೇ ಮೂಲೆಯಲ್ಲಿರಲಿ ಒಳಬರುವ ಕರೆಗಳನ್ನು ಹಣ ಕಡಿತವಿಲ್ಲದೇ ನೆಮ್ಮದಿಯಿಂದ ಮಾತನಾಡಬಹುದಾಗಿದೆ ಎಂದು ಕಂಪೆನಿಯ ನಿರ್ದೇಶಕ ಸಂದೀಪ್ ಕಟಾರಿಯಾ ತಿಳಿಸಿದ್ದಾರೆ.
ರೋಮಿಂಗ್‌ನಲ್ಲಿರುವಾಗ ಹೊರಹೋಗುವ ಕರೆ ದರಗಳಲ್ಲಿ ಕೂಡಾ ಕಡಿತಗೊಳಿಸಲಾಗಿದೆ. ಆದರೆ,ರೋಮಿಂಗ್‌ನಲ್ಲಿರುವಾಗ ಒಳಬರುವ ಕರೆಗಳನ್ನು ಮಾತ್ರ ಉಚಿತವಾಗಿ ಸ್ವೀಕರಿಸಬಹುದಾಗಿದೆ.
ಪ್ರಸಕ್ತ ಹಬ್ಬದ ಸೀಜನ್ ಸಂದರ್ಭದಲ್ಲಿ 200 ಮಿಲಿಯನ್ ಗ್ರಾಹಕರ ಗುರಿಯನ್ನು ತಲುಪುವ ಉದ್ದೇಶ ಹೊಂದಿದೆ ಎಂದು ಕಂಪೆನಿಯ ನಿರ್ದೇಶಕ ಸಂದೀಪ್ ಕಟಾರಿಯಾ ತಿಳಿಸಿದ್ದಾರೆ.
Comments are closed.