ಅಂತರಾಷ್ಟ್ರೀಯ

ಇಮ್ರಾನ್ ಖಾನ್‌ರನ್ನು ಬಂಧಿಸಲು ಆದೇಶಿಸಿದ ಪಾಕ್ ಕೋರ್ಟ್

Pinterest LinkedIn Tumblr

imrankhan_new_630ಇಸ್ಲಾಮಾಬಾದ್: 2014ರಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆ ವೇಳೆ ಪಾಕಿಸ್ತಾನ ಟೆಲಿವಿಷನ್ ಕೇಂದ್ರಕಚೇರಿ ಮೇಲಿನ ದಾಳಿ ಸಂಬಂಧ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಹಾಗೂ ಪಾದ್ರಿ ತೆಹಿರೂಲ್ ಕ್ವಾದ್ರಿರನ್ನು ಬಂಧಿಸುವಂತೆ ಪಾಕಿಸ್ತಾನ ಭಯೋತ್ಪಾದನೆ ವಿರೋಧಿ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
ಪಾಕಿಸ್ತಾನ ಟೆಲಿವಿಷನ್ ಕೇಂದ್ರ ಕಚೇರಿ ದಾಳಿ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ವಾರೆಂಟ್ ಹೊರಡಿಸಿತ್ತು. ಇದರಲ್ಲಿ ಪೊಲೀಸರು ವಿಫಲರಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಂಧಿಸುವಂತೆ ಆದೇಶಿಸಿದೆ.
ಬಂಧನ ವಾರೆಂಟ್ ಹೊರಡಿಸಿದ್ದ ಆದೇಶವನ್ನು ಪಾಲಿಸುವಲ್ಲಿ ಪೊಲೀಸರು ವಿಫಲರಾಗಿರುವುದಕ್ಕೆ ನ್ಯಾಯಮೂರ್ತಿ ಕೌಸರ್ ಅಬ್ಬಾಸ್ ಝೈದಿ ಕಿಡಿಕಾರಿದ್ದಾರೆ.
ಪಾಕಿಸ್ತಾನ ತೆಹ್ರಿಕ್ ಇ ಇನ್ಸಾನ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನ ಅವಾಮಿ ತೆಹ್ರಿಕ್ ನ ಪಾದ್ರಿ ತಹಿರೂಲ್ ಕ್ವಾದ್ರಿ ಸೇರಿದಂತೆ ಎರಡು ಪಕ್ಷದ 68 ಮಂದಿ ಕಾರ್ಯಕರ್ತರನ್ನು ಬಂಧಿಸಿ ನವೆಂಬರ್ 17ರೊಳಗೆ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಕೋರ್ಟ್ ಆದೇಶಿಸಿದೆ.

Comments are closed.