ಅಂತರಾಷ್ಟ್ರೀಯ

ಟ್ರಂಫ್ ರಷ್ಯಾ ಅಧ್ಯಕ್ಷರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ: ಕ್ಲಿಂಟನ್ ವಾಗ್ದಾಳಿ

Pinterest LinkedIn Tumblr

hillary-clinton

ಲಾಸ್ ವೆಗಾಸ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ಕೊನೆಯ ಮತ್ತು ಮೂರನೇ ಚರ್ಚೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಫ್ ಮತ್ತು ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿಚಾರವಾಗಿ ವಾಗ್ಯುದ್ಧ ನಡೆಸಿದ್ದಾರೆ.

ಮೊದಲೆರಡು ಚರ್ಚೆಗಳಲ್ಲಿ ವೈಯಕ್ತಿಕ ಟೀಕೆಗೆ ಮುಂದಾಗಿದ್ದ ಕ್ಲಿಂಟನ್ ಮತ್ತು ಟ್ರಂಫ್ ಮೂರನೇ ಚರ್ಚೆಯಲ್ಲಿ ರಾಜಕೀಯ ನೀತಿಗಳ ಕುರಿತು ಚರ್ಚೆ ನಡೆಸಿದರು.

ಟ್ರಂಫ್ ರಷ್ಯಾ ಅಧ್ಯಕ್ಷರ ನೀತಿಗಳನ್ನು ಟೀಕಿಸಲು ನಿರಾಕರಿಸುತ್ತಿದ್ದಾರೆ. ಮತ್ತು ರಷ್ಯಾ ನಡೆಸುತ್ತಿರುವ ಸೈಬರ್ ದಾಳಿಗಳನ್ನೂ ಸಹ ಖಂಡಿಸುತ್ತಿಲ್ಲ. ಟ್ರಂಫ್ ನಮ್ಮ ಸೇನೆ ಮತ್ತು ನಮ್ಮ ಗೂಢಚರ ದಳದ ಅಧಿಕಾರಿಗಳಿಂಗಿಂತಳು ಪುಟಿನ್ ಅವರನ್ನು ಹೆಚ್ಚಾಗಿ ನಂಬುತ್ತಿದ್ದಾರೆ. ಅವರು ಪುಟಿನ್ನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕ್ಲಿಂಟನ್ ಟ್ರಂಫ್ ವಿರುದ್ಧ ವಾಗ್ದಾಳಿ ನಡೆಸಿದರು.

ಆದರೆ ಕ್ಲಿಂಟನ್ ಆರೋಪವನ್ನು ತಳ್ಳಿ ಹಾಕಿದ ಟ್ರಂಫ್ ನಾನು ಪುಟಿನ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತೇನೆ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡರು.

ಚರ್ಚೆಯ ಸಂದರ್ಭದಲ್ಲಿ ಸಮಾಜ ಘಾತುಕ ಶಕ್ತಿಗಳು ಅಕ್ರಮ ಶಸ್ತ್ರಸ್ತ್ರಗಳ ಮೂಲಕ ಹತ್ಯೆ ನಡೆಸುತ್ತಿರುವುದನ್ನು ತಡೆಯಬೇಕಾದ ಅವಶ್ಯಕತೆ ಇದೆ. ಪ್ರತೀ ವರ್ಷ ಅಮೆರಿಕದಲ್ಲಿ ಗುಂಡಿನ ದಾಳಿಯಿಂದಾಗಿ ಸುಮಾರು 33 ಸಾವಿರ ಜನರು ಮೃತಪಡುತ್ತಿದ್ದಾರೆ ಎಂದು ವಾದಿಸಿದರೆ, ಟ್ರಂಫ್ ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಹೊಂದಲು ಅವಕಾಶ ನೀಡಬೇಕು ಎಂದು ವಾದಿಸಿದರು.

Comments are closed.