ಅಂತರಾಷ್ಟ್ರೀಯ

ಶೀಘ್ರದಲ್ಲೇ 10000 mAh ಬ್ಯಾಟರಿ ಫೋನ್

Pinterest LinkedIn Tumblr

phoneಬೀಜಿಂಗ್: ಔಕಿ ಟೆಲ್ ಹೊಸ 10000 ಎಸ್ ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಸ್ಲಿಮ್ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚೀನಾದ ಔಕಿ ಟೆಲ್ ಕಂಪೆನಿ ಗ್ರಾಹಕರು ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಪವರ್‍ಬ್ಯಾಂಕ್ ಬಳಸುವ ಬದಲು ಫೋನಿಗೆ ಶಕ್ತಿಶಾಲಿ ಬ್ಯಾಟರಿಯನ್ನು ನೀಡಿದೆ.

ಈ ಹಿಂದೆ ಬಿಡುಗಡೆ ಮಾಡಿದ ಔಕಿ ಟೆಲ್ 10000 ಫೋನ್ 20 ಎಂಎಂ ದಪ್ಪವನ್ನು ಹೊಂದಿತ್ತು. ಆದರೆ ಈಗ ಈ ಫೋನ್ ಮತ್ತಷ್ಟು ಸ್ಲಿಮ್ ಇರಲಿದೆ ಎಂದು ಹೇಳಿದೆ. ಈ ಸ್ಮಾರ್ಟ್‍ಫೋನಿನ ಬೆಲೆಯನ್ನು ಕಂಪೆನಿ ತಿಳಿಸದೇ ಇದ್ದರೂ 239 ಡಾಲರ್( ಅಂದಾಜು 16 ಸಾವಿರ ರೂ.) ಇರಬಹುದು ಎಂದು ಹೇಳಲಾಗುತ್ತಿದೆ.

ಔಕಿ ಟೆಲ್ 10000 ಗುಣ ವೈಶಿಷ್ಟ್ಯಗಳು:
ಡ್ಯುಯಲ್ ಸಿಮ್, ಆಂಡ್ರಾಯ್ಡ್ ಲಾಲಿಪಪ್ ಓಎಸ್, 5.5 ಇಂಚಿನ ಐಪಿಎಸ್ ಸ್ಕ್ರೀನ್(1280*720 ಪಿಕ್ಸೆಲ್) 8 ಎಂಪಿ ಹಿಂದುಗಡೆ, 2 ಎಂಪಿ ಮುಂದುಗಡೆ ಕ್ಯಾಮೆರಾ, ಮೀಡಿಯಾ ಟೆಕ್ ಕ್ವಾಡ್‍ಕೋರ್ ಪ್ರೊಸೆಸರ್, 2ಜಿಬಿ ರಾಮ್, 16 ಜಿಬಿ ಆಂತರಿಕ ಮೆಮೊರಿ, 4ಜಿ ಎಲ್‍ಟಿಇ ಕನೆಕ್ಟಿವಿಟಿ, 184 ಗ್ರಾಂ ತೂಕವನ್ನು ಹೊಂದಿದೆ.

Comments are closed.