ಅಂತರಾಷ್ಟ್ರೀಯ

ರಸ್ತೆ ದಾಟಿದ ಕೋಳಿಯ ಬಂಧನ!

Pinterest LinkedIn Tumblr

koliಎಡಿನ್‍ಬರ್ಗ್: ನಮ್ಮ ಊರಲ್ಲಿ ಕೋಳಿ, ಆಡು, ಕುರಿಗಳು ಎಲ್ಲೆಂದರಲ್ಲಿ ನುಗ್ಗೋದು ಕಾಮನ್. ಹಾಗೆ ಪಟ್ಟಣಗಳಲ್ಲಿ ನಡುರಸ್ತೆಯಲ್ಲಿ ಹಸುಗಳು ನಿಲ್ಲೋದನ್ನೂ ಕೂಡ ನೋಡಿರ್ತೀವಿ. ಹೀಗೆಲ್ಲಾ ಆದಾಗ ವಾಹನ ಸವಾರರು ಅದನ್ನ ಲೆಕ್ಕಿಸದೆ ಟರ್ನ್ ತೆಗೆದುಕೊಂಡು ಮುಂದೆ ಸಾಗ್ತಾರೆ. ಆದ್ರೆ ವಿಚಿತ್ರ ಘಟನೆಯೊಂದರಲ್ಲಿ ಕೋಳಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಏನು? ಕೋಳಿನ ಯಾರಾದ್ರೂ ಅರೆಸ್ಟ್ ಮಾಡ್ತಾರಾ? ಅನ್ನೋ ಪ್ರಶ್ನೆ ಬಂದೇ ಬರುತ್ತೆ. ಹೌದು. ನಂಬಲು ವಿಚಿತ್ರ ಎನಿಸಿದ್ರೂ ಇದು ನಿಜ. ಇಂತಹದ್ದೊಂದು ಘಟನೆ ಸ್ಕಾಟ್‍ಲ್ಯಾಂಡ್‍ನಲ್ಲಿ ನಡೆದಿದೆ. ವಾಹನ ಸಂಚಾರದ ನಡುವೆ ರಸ್ತೆ ದಾಟಲು ಯತ್ನಿಸಿದ ಕೋಳಿಯನ್ನ ಇಲ್ಲಿನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇಲ್ಲಿನ ಈಸ್ಟ್ ಮಾರ್ಕೆಟ್‍ಗೇಟ್‍ನಲ್ಲಿ ರಸ್ತೆ ದಾಟಲು ಯತ್ನಿಸಿದ ಕೋಳಿ ಇತರೆ ವಾಹನ ಸವಾರರಲ್ಲಿ ಆತಂಕ ಉಂಟು ಮಾಡಿದೆ ಅಂತ ವಾಹನ ಸವಾರರೊಬ್ಬರು ಪೊಲೀಸರಿಗೆ ವರದಿ ಮಾಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಕೋಳಿಯನ್ನ ಹಿಡಿದು ಟೇಸೈಡ್ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಕೋಳಿಯ ಮಾಲೀಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಲ್ಲಿಯವರೆಗೂ ಕೋಳಿಯನ್ನ ನೋಡಿಕೊಳ್ಳುವಂತೆ ಸ್ಕಾಟಿಶ್ ಸೊಸೈಟಿ ಆಫ್ ಪ್ರಿವೆಂನ್ಷನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ ಸಂಸ್ಥೆಯನ್ನ ಸಂಪರ್ಕಿಸಲಾಗಿದೆ ಅಂತ ಪೊಲೀಸರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

Comments are closed.