ಅಂತರಾಷ್ಟ್ರೀಯ

ವಿಮಾನ ನಿಲ್ದಾಣದಲ್ಲೇ ಒಮರ್ ಅಬ್ದುಲ್ಲಾರನ್ನು 2 ಗಂಟೆ ಪರಿಶೀಲನೆ

Pinterest LinkedIn Tumblr

Omar-Abdullahನ್ಯೂಯಾರ್ಕ್(ಅ.17): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಪರಿಶೀಲನೆಗಾಗಿ 2 ಗಂಟೆಗಳ ಕಾಲ ಕಾಯಿಸಿದ ಘಟನೆ ಅಮೆರಿಕದ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ಕುರಿತಂತೆ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಒಮರ್ ಅಬ್ದುಲ್ಲಾ , ಅಮೆರಿಕ ದೇಶಕ್ಕೆ ನಾನು ಇದು 3ನೇ ಬಾರಿ ಭೇಟಿ ನೀಡುತ್ತಿದ್ದು, ಮೂರನೇ ಬಾರಿ ಕೂಡ ನನಗೆ ಸಮಸ್ಯೆ ಎದುರಾಗಿದೆ.
ಅಮೆರಿಕ ವಿಮಾನ ನಿಲ್ದಾಣದಲ್ಲಿ 2 ಗಂಟೆಗಳ ಕಾಲ ಉಳಿಯಬೇಕಾಯಿತು. ವಿಮಾನ ನಿಲ್ದಾಣದಲ್ಲಿ ನಡೆಸಲಾಗುತ್ತಿರುವ ಹೆಚ್ಚುವರಿ ತಪಾಸಣೆ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಪ್ರತೀ ಬಾರಿ ಅಮೆರಿಕ ದೇಶಕ್ಕೆ ಹೋದಾಗಲೆಲ್ಲಾ ನಾನು ಈ ಸಮಸ್ಯೆಯನ್ನು ಎದುರಿಸುತ್ತಿರುತ್ತೇನೆಂದು ಹೇಳಿದ್ದಾರೆ. ಎನ್ ವೈಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಅಮೆರಿಕಾಗೆ ಬಂದಿದ್ದೆ. ಆದರೆ, 2 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ವ್ಯರ್ಥವಾಗಿಯಿತು. ಇದರ ಬದಲು ಮನೆಯಲ್ಲಿಯೇ ಇರಬಹುದಿತ್ತು ಎಂದು ಹೇಳಿಕೊಂಡಿದ್ದಾರೆ.

Comments are closed.