ಅಂತರಾಷ್ಟ್ರೀಯ

ಉಗ್ರರನ್ನು ಮಟ್ಟ ಹಾಕಲು ಪಾಕ್’ಗೆ ಖಡಕ್ ಎಚ್ಚರಿಕೆ ನೀಡಿದ ಅಮೆರಿಕ

Pinterest LinkedIn Tumblr

america-pak

ವಾಷಿಂಗ್ಟನ್‌: ಪಾಕಿಸ್ಥಾನ ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಹಾಗೂ ತನ್ನಲ್ಲಿ ಸುರಕ್ಷಿತ ತಾಣಗಳನ್ನು ಕಂಡುಕೊಳ್ಳುತ್ತಿರುವ ಉಗ್ರರನ್ನು ಸದೆಬಡಿಯಬೇಕು ಮತ್ತು ಉಗ್ರರ ಸಂಘಟನೆಗಳನ್ನು ಕಾನೂನುಬಾಹಿರವೆಂದು ಘೋಷಿಸಿ ಕಠಿನ ಕ್ರಮತೆಗೆದುಕೊಳ್ಳಬೇಕು ಎಂದು ಅಮೆರಿಕ ಮತ್ತೆ ಇಸ್ಲಾಮಾಬಾದನ್ನು ಒತ್ತಾಯಿಸಿದೆ.

“ಪಾಕಿಸ್ಥಾನ ಸ್ವತಃ ಭಯೋತ್ಪಾದಕ ಕೃತ್ಯಗಳಿಂದ ತೀವ್ರವಾಗಿ ನಲುಗಿದೆ ಎನ್ನುವುದು ಸತ್ಯವೇ ಆದರೂ ಪಾಕ್‌ ಸರಕಾರ ತನ್ನ ನೆಲದಿಂದ ಕಾರ್ಯಾಚರಿಸುವ ಉಗ್ರರು ಹಾಗೂ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲೇಬೇಕಾದ ಕಾನೂನು ಸಮ್ಮತ ಹೊಣೆಗಾರಿಕೆಯನ್ನು ಹೊಂದಿದೆ.ಆದುದರಿಂದ ಪಾಕಿಸ್ಥಾನ ತನ್ನಲ್ಲಿನ ಉಗ್ರರನ್ನು ಇನ್ನಾದರೂ ಮಟ್ಟಹಾಕಲೇಬೇಕು ಮತ್ತು ಆ ಉಗ್ರರ ಸಂಘಟನೆಗಳನ್ನು ಕಾನೂನು ಬಾಹಿರವೆಂದು ಘೋಷಿಸಿ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ಉಪ ವಕ್ತಾರ ಮಾರ್ಕ್‌ ಟೋನರ್‌, ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.

19 ಭಾರತೀಯ ಸೈನಿಕರ ಹತ್ಯೆಗೆ ಕಾರಣವಾದ ಉರಿ ಸೇನಾ ಶಿಬಿರದ ಮೇಲಿನ ಪಾಕ್‌ ಉಗ್ರರ ದಾಳಿಯ ಬಳಿಕ ಭಾರತ – ಪಾಕ್‌ ಸಂಬಂಧಗಳು ತೀವ್ರವಾಗಿ ಹದಗೆಟ್ಟು ಉಭಯ ದೇಶಗಳ ನಡುವಿನ ಉದ್ವಿಗ್ನತೆ ಪರಾಕಾಷ್ಠೆಗೆ ಏರಿದೆ. ಅದಾಗಿ ಭಾರತ ಪಾಕಿಸ್ಥಾನದ ಪಿಓಕೆ ಗಡಿಯೊಳಗೆ ನುಗ್ಗಿ ಸರ್ಜಿಕಲ್‌ ದಾಳಿ ನಡೆಸಿ ಅಲ್ಲಿನ ಉಗ್ರರ ಏಳು ಲಾಂಚ್‌ ಪ್ಯಾಡಗಳನ್ನು ನಾಶಪಡಿಸಿ ಹಲವಾರು ಉಗ್ರರನ್ನು ಹತ್ಯೆಗೈದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ, ಪಾಕಿಸ್ಥಾನಕ್ಕೆ ತನ್ನಲ್ಲಿನ ಉಗ್ರರನ್ನು ಇನ್ನಾದರೂ ಮಟ್ಟ ಹಾಕುವಂತೆ ಖಡಕ್‌ ಎಚ್ಚರಿಕೆ ನೀಡಿದೆ.

Comments are closed.