ಅಂತರಾಷ್ಟ್ರೀಯ

ತನ್ನ ದೇಶದ ಸೇನೆಯ ಕುರಿತು ಪ್ರಶ್ನಿಸುವ ಪಾಕ್ ಹುಡುಗಿಯ ವಿಡಿಯೋ ವೈರಲ್

Pinterest LinkedIn Tumblr

pakಇಸ್ಲಾಮಾಬಾದ್: ಪಾಕಿಸ್ತಾನದ ಯುವತಿಯೊಬ್ಬಳು ತನ್ನ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿರುವ ವಿಚಾರದಲ್ಲಿ ಸೇನೆಯ ಪಾತ್ರವೇನು ಎಂದು ಖಡಕ್ ಆಗಿ ಪ್ರಶ್ನೆ ಕೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಈ ವಿಡಿಯೋ ಒಂದು ವರ್ಷ ಹಳೆಯದಾದ್ರೂ ಈಗ ಸಖತ್ ವೈರಲ್ ಆಗಿದೆ. ಚರ್ಚೆಯೊಂದರಲ್ಲಿ ಈ ಯುವತಿ, ಭಯೋತ್ಪಾದನೆಗೂ ಸೇನೆಗೂ ಸಂಬಂಧವೇನು ಎಂದು ಪ್ರಶ್ನಿಸಿದ್ದಾಳೆ. ಅದಾಗಲೇ ಅನೇಕ ವಿಷಯಗಳ ಮೇಲೆ ಚರ್ಚೆ ನಡೆದಿತ್ತು. ಆದ್ರೆ ಎಲ್ಲಿಯೂ ಪಾಕಿಸ್ತಾನದ ಸೇನೆಯ ಬಗ್ಗೆ ಪ್ರಸ್ತಾಪವಾಗಿರಲಿಲ್ಲ. ಹೀಗಾಗಿ ಯುವತಿ ಸೇನೆಯ ಬಗ್ಗೆ ಚರ್ಚಿಸುವುದು ಅಗತ್ಯ ಎಂದು ಈ ಪ್ರಶ್ನೆಗಳನ್ನ ಕೇಳಿದ್ದಾಳೆ.

ನಾವು ಸುಮಾರು 10 ನಿಮಿಷಗಳವರೆಗೆ ಪಾಕಿಸ್ತನದಲ್ಲಿನ ಉಗ್ರತ್ವದ ಬಗ್ಗೆ ಚರ್ಚೆ ಮಾಡಿದೆವು. ಅಮೆರಿಕ, ಭಾರತದ ಬಗ್ಗೆ ಮಾತನಾಡಿದ್ದೇವೆ. ಭ್ರಷ್ಟ ಸರ್ಕಾರದ ಬಗ್ಗೆ ಮಾತನಾಡಿದೆವು. ಆದ್ರೆ ಎಲ್ಲೂ ಪಾಕಿಸ್ತಾನದ ಸೇನೆಯ ಬಗ್ಗೆ ಪ್ರಸ್ತಾಪವಾಗಲಿಲ್ಲ. ನಾವು ಇತಿಹಾಸವನ್ನು ಅರ್ಥ ಮಾಡಿಕೊಂಡು ಅದರಿಂದ ಕಲಿಯಬೇಕು. ಈ ದೇಶದ ಇತಿಹಾಸ ನಿರ್ಮಿಸುವಲ್ಲಿ ಸೇನೆಯ ಪಾತ್ರ ಮಹತ್ವದ್ದಾಗಿದೆ. ಸಾಕಷ್ಟು ಕಾಲ ಈ ದೇಶ ಮಿಲಿಟರಿ ಆಡಳಿತದಲ್ಲಿತ್ತು. ಹೀಗಾಗಿ ಯಾವುದೇ ರಾಜಕೀಯ ಅಥವಾ ರಾಜತಾಂತ್ರಿಕ ಚರ್ಚೆ ನಡೆಯುವಾಗ ಸೇನೆಯ ಬಗ್ಗೆ ಚರ್ಚಿಸುವುದು ಅಗತ್ಯ ಅಂತ ಹೇಳಿದ್ದಾಳೆ. ಈ ದೇಶದಲ್ಲಿ ರಾಜಕೀಯ ಬಣ, ಮಾಧ್ಯಮದ ಬಣ, ನ್ಯಾಯಾಂಗ ಬಣ ಇದ್ದಂತೆ ಮಿಲಿಟರಿ ಬಣವೂ ಇದೆ. ಅದನ್ನು ಬೆಳಕಿಗೆ ತರಬೇಕು ಎಂದಿದ್ದಾಳೆ.

ಪಾಕಿಸ್ತಾನದಲ್ಲಿ ಉಗ್ರತ್ವ ಹೆಚ್ಚುತಿರುವುದಕ್ಕೆ ಸೇನೆಯ ಜೊತೆ ಸಂಬಂಧ ಕಲ್ಪಿಸಲಾಗುತ್ತದೆ. ಹೀಗಾಗಿ ಸೇನೆಯ ಬಗ್ಗೆ ಚರ್ಚೆ ಮಾಡುವುದು ಅಗತ್ಯ ಅಂತ ಖಡಕ್ ಆಗಿ ಹೇಳಿದ್ದಾಳೆ.

Comments are closed.