ಅಂತರಾಷ್ಟ್ರೀಯ

ಬಾಬ್ ಡೈಲಾನ್​ಗೆ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ

Pinterest LinkedIn Tumblr

bob-dylan

ಸ್ಟಾಕ್ ಹೋಮ್: ಸಾಹಿತ್ಯಕ್ಕೆ ನೀಡಲಾಗುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಸಾಹಿತಿ ಬಾಬ್ ಡೈಲಾನ್ ಗೆದ್ದಿದ್ದಾರೆ ಎಂದು ಸ್ವೀಡಿಷ್ ಅಕಾಡೆಮಿ ಗುರುವಾರ ಪ್ರಕಟಿಸಿದೆ. ಮಹಾನ್ ಅಮೆರಿಕದ ಹಾಡುಗಳ ಪರಂಪರೆಗೆ ಹೊಸ ಕಾವ್ಯ ಅಭಿವ್ಯಕ್ತಿಗಳನ್ನು ಸೃಷ್ಟಿಸಿದ್ದಕ್ಕಾಗಿ ಡೈಲಾನ್ ಅವರಿಗೆ 80 ಲಕ್ಷ ಸ್ವೀಡಿಷ್ ಕ್ರೌನ್ (927,740 ಡಾಲರ್) ಮೊತ್ತದ ಪ್ರಶಸ್ತಿ ಸಂದಿದೆ.

ಈ ವರ್ಷದ ನೊಬೆಲ್ ಪ್ರಶಸ್ತಿ ಪಟ್ಟಿಯಲ್ಲಿ ಸಾಹಿತ್ಯಕ್ಕೆ ನೀಡಲಾಗುವ ಪ್ರಶಸ್ತಿ ಕೊನೆಯದಾಗಿದೆ. ಡೈನಮೈಟ್ ಸಂಶೋಧಕ ಅಲ್ಪ್ರೆಡ್ ನೊಬೆಲ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು 1901ರಿಂದ ಪ್ರತಿವರ್ಷ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಸ್ಥಾಪನೆ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಅಲ್ಪ್ರೆಡ್ ನೊಬೆಲ್ ಅವರ ಆಶಯದಂತೆ ನೀಡುತ್ತಾ ಬರಲಾಗಿದೆ.

Comments are closed.