ಅಂತರಾಷ್ಟ್ರೀಯ

ಕಟ್ಟಡ ಕುಸಿತ: ಅಪ್ಪನ ಕೊನೆಯ ಅಪ್ಪುಗೆ ಮಗಳ ಜೀವ ಉಳಿಸಿತು!

Pinterest LinkedIn Tumblr

china-fatherಬೀಜಿಂಗ್: ಚೀನಾದಲ್ಲಿ ಕುಸಿದು ಬೀಳುತ್ತಿದ್ದ ಆರು ಹಂತಸ್ಥಿನ ಕಟ್ಟಡದ ಅವಶೇಷಗಳು ಬೀಳದಂತೆ ಮಗಳನ್ನು ಬಿಗಿದಪ್ಪಿ ತಂದೆ ನೀಡಿದ ರಕ್ಷಣೆ ಮೂರು ವರ್ಷದ ಮಗುವಿನ ಪ್ರಾಣ ಉಳಿಸಿದ ಘಟನೆ ಮಂಗಳವಾರ ವರದಿಯಾಗಿದೆ.
ಸತತ 12 ಗಂಟೆಗಳ ಕಾರ್ಯಾಚರಣೆಯ ನಂತರ ಸತ್ತ ಅಪ್ಪನ ಅಪ್ಪುಗೆಯಲ್ಲಿದ್ದ ಪುತ್ರಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದು, ಬಾಲಕಿಗೆ ಕೆಲವು ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸರ್ಕಾರಿ ಮಾಧ್ಯಮ ಸಿಸಿಟಿವಿ ವರದಿ ಮಾಡಿದೆ.
ಝೆಜಿಯಾಂಗ್ ಪೂರ್ವ ಪ್ರಾಂತ್ಯದ ವೆಂಝೋಹುವಿನಲ್ಲಿ ಬಹುಮಹಡಿ ವಸತಿ ವಸತಿ ಕಟ್ಟಡ ಕುಸಿದಿ ಬಿದ್ದಿದ್ದು, ಅವಶೇಷಗಳ ಅಡಿಯಲ್ಲಿ ಅತ್ಯಂತ ಆಳದಲ್ಲಿದ್ದ ವು ನಿಂಗ್ಸಿ ಎಂಬ ಮೂರು ವರ್ಷದ ಮಗುವನ್ನು ರಕ್ಷಿಸಲಾಗಿದೆ.
ಅಪ್ಪನ ಅಪ್ಪುಗೆಯ ಪರಿಣಾಮವಾಗಿ ಆಕೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ. ಕುಸಿದ ಕಟ್ಟಡದ ಅಡಿಯಲ್ಲಿ ಆಕೆಯ ಅಪ್ಪ, ಅಮ್ಮ ಸೇರಿದಂತೆ ಇಡೀ ಕುಟಂಬ ಸರ್ವ ನಾಶವಾಗಿವೆ. ಕಟ್ಟಡ ಕುಸಿತ ದುರಂತದಲ್ಲಿ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿಸಿಟಿವಿ ತಿಳಿಸಿದೆ.
ತಾನು ಸಾಯುವ ಮುನ್ನ ತನ್ನ ಪುಟ್ಟ ಮಗುವನ್ನು ಅಪ್ಪಿ ಹಿಡಿದು ಉಸಿರಾಡಲು ಸಾಧ್ಯವಾಗುವಂತೆ ಅವಕಾಶ ಕಲ್ಪಿಸಿಕೊಟ್ಟ ಅಕೆಯ ತಂದೆಯ ಕಾರಣದಿಂದಲೇ ಪುಟ್ಟ ಮಗು ಬದುಕಿದೆ. ಇದಕ್ಕಾಗಿ ತನ್ನ ಜೀವಬಲಿ ನೀಡಿದ ಅಪ್ಪನಿಗೆ ಧನ್ಯವಾದ ಹೇಳಬೇಕು ಎಂದು ಆಕೆಯನ್ನು ರಕ್ಷಿಸಿ ಹೊರತಂದ ಸಿಬ್ಬಂದಿ ಸ್ಥಳೀಯ ದೈನಿಕಕ್ಕೆ ತಿಳಿಸಿದ್ದಾರೆ. 26ರ ಹರೆಯದ ಮೃತ ತಂದೆ ಷೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

Comments are closed.