ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮಾನ ಹರಾಜಾಗುತ್ತಿದ್ದರು ಉಗ್ರ ಜಮಾತ್ ಉದ್ ದವಾ ಉಗ್ರ ಸಂಘಟನೆಯ ಹಫೀಜ್ ಸಯೀದ್ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸರ್ಕಾರದ ವಿರುದ್ಧವೇ ಸಂಸದ ರಾಣಾ ಮೊಹಮ್ಮದ್ ಅಫ್ಜಲ್ ಕಿಡಿಕಾರಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಂಸದೀಯ ಮಂಡಳಿ ಸಭೆಯಲ್ಲಿ ರಾಣಾ ಅವರು ಈ ಪ್ರಶ್ನೆಯನ್ನು ಎತ್ತಿದ್ದಾರೆ. ಹಫೀಜ್ ಸಯೀದ್ ರಂಥ ವ್ಯಕ್ತಿಗಳಿಗೆ ನಾವು ಯಾಕೆ ಬೆಳೆಯಲು ಅವಕಾಶ ಕೊಡಬೇಕು. ಹಫೀಜ್ ಸಯೀದ್ ಏನು ಚಿನ್ನದ ಮೊಟ್ಟೆ ಇಡುತ್ತಿದ್ದಾನೆಯೇ ಎಂದು ಕೇಳಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಬಿಂಬಿತವಾಗುತ್ತಿದೆ. ಇಂತ ಸಂದರ್ಭದಲ್ಲೂ ಸರ್ಕಾರ ಉಗ್ರರ ವಿರುದ್ಧ ಕ್ರಮಕೈಗೊಳ್ಳದೆ ಇದ್ದರೆ ಪಾಕಿಸ್ತಾನ ಅಪಖ್ಯಾತಿಗೆ ಕಾರಣವಾಗುತ್ತದೆ ಎಂದರು.