ಅಂತರಾಷ್ಟ್ರೀಯ

ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾನಟೋಸ್ ಗೆ ನೊಬೆಲ್ ಶಾಂತಿ ಪ್ರಶಸ್ತಿ

Pinterest LinkedIn Tumblr

nobel-peace-prizeಓಸ್ಲೋ: ಕೊಲಂಬಿಯಾದ ಸರ್ಕಾರ ಮತ್ತು ಎಫ್ಎಆರ್ ಸಿ ಬಂಡಾಯ ಗುಂಪಿನ ನಡುವೆ ಶಾಂತಿ ನೆಲೆಸಲು ಪ್ರಮುಖ ಕಾರಣವಾಗಿದ್ದ ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಾರ್ವೆಯ ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿ 2016 ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಅಂತಿಮಗೊಳಿಸಿದ್ದು, ಕಳೆದ 50 ವರ್ಷಗಳಿಂದ ಕೊಲಂಬಿಯಾ ಸರ್ಕಾರ ಮತ್ತು ಎಫ್ಎಆರ್ ಸಿ ನಡುವೆ ನಡೆಯುತ್ತಿದ್ದ ನಾಗರಿಕ ಯುದ್ಧವನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಗೆ ಪ್ರಶಸ್ತಿಯನ್ನು ಘೋಷಿಸಿದೆ. ಕಳೆದ 50 ವರ್ಷ ನಡೆದ ಯುದ್ಧದಲ್ಲಿ 220,000 ಕೊಲಂಬಿಯನ್ನರು ಮೃತಪಟ್ಟಿದ್ದರು. ಅಷ್ಟೇ ಅಲ್ಲದೆ 6 ಮಿಲಿಯನ್ ಕೊಲಂಬಿಯನ್ನರು ಮೂಲ ಪ್ರದೇಶದಿಂದ ಸ್ಥಳಾಂತರಗೊಂಡಿದ್ದರು. ಕ್ಯೂಬಾದಲ್ಲಿ 2012 ರಲ್ಲಿ ಪ್ರಾರಂಭವಾಗಿದ್ದ ಮಾತುಕತೆಯ ಭಾಗವಾಗಿ ಶಾಂತಿಯುತ ಒಪ್ಪಂದಕ್ಕೆ ಸಹಿಹಾಕುವ ಪ್ರಸ್ತಾವನೆಗೆ ಶೇ.52 ರಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು.
ಸೆ.26 ರಂದು ಕೊಲಂಬಿಯಾ ಹಾಗೂ ಎಫ್ಎಆರ್ ಸಿ ನಡುವೆ ಐತಿಹಾಸಿಕ ಶಾಂತಿಯುತ ಒಪ್ಪಂದ ನಡೆದಿತ್ತು. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ 376 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಈ ಪೈಕಿ 228 ವ್ಯಕ್ತಿಗಳು ಹಾಗೂ 148 ಸಂಸ್ಥೆಗಳಿದ್ದವು.

Comments are closed.