ಅಂತರಾಷ್ಟ್ರೀಯ

ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂಬ ಘೋಷಣೆಗೆ ಬೆಂಬಲಿಸಲ್ಲ ಎಂದ ಅಮೆರಿಕ

Pinterest LinkedIn Tumblr

paak

ವಾಷಿಂಗ್ಟನ್: ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಪಾಕಿಸ್ತಾನವನ್ನು ‘ಉಗ್ರ ರಾಷ್ಟ್ರ’ ಎಂದು ಘೋಷಿಸಲು ಅಮೆರಿಕ ಸರ್ಕಾರ ಬೆಂಬಲಿಸುವುದಿಲ್ಲ, ಆದರೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಪಾಕಿಸ್ತಾನಕ್ಕೆ ಪೂರ್ಣ ಬೆಂಬಲ ನೀಡಲಾಗುವುದು ಎಂದು ಅಮೆರಿಕ ತಿಳಿಸಿದೆ. ಇದರಿಂದಾಗಿ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲು ನಾವು ಬೆಂಬಲಿಸುವುದಿಲ್ಲ. ಆದರೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಪಾಕಿಸ್ತಾನಕ್ಕೆ ಪೂರ್ಣ ಬೆಂಬಲ ನೀಡಲಾಗುವುದು ಎಂದು ಅಮೆರಿಕ ತಿಳಿಸಿದೆ.

ಪಾಕ್ ಉಗ್ರ ರಾಷ್ಟ್ರ ಎಂದು ಘೋಷಿಸಲು ಅಮೆರಿಕ ಸಂಸತ್ತಿನಲ್ಲಿ ಮಂಡನೆಯಾಗಿರುವ ಮಸೂದೆಗೆ ಅಮೆರಿಕ ಸರ್ಕಾ ಬೆಂಬಲಿಸಲಿದೆಯೇ ಎಂಬ ಪ್ರಶ್ನೆಗೆ ಸ್ಟೇಟ್ ಡಿಪಾರ್ಟ್ ಮೆಂಟ್ ನ ವಕ್ತಾರ ಜಾನ್ ಕಿರ್ಬಿ ಉತ್ತರಿಸಿದರು. ಮಸೂದೆಯಲ್ಲಿ ಈ ಅಂಶದ ಕುರಿತು ಸ್ಪಷ್ಟನೆ ಇಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಪಾಕಿಸ್ತಾನ ದಕ್ಷಿಣ ಏಷ್ಯಾ ಭಾಗದಲ್ಲಿ ನಡೆಸುತ್ತಿರುವ ಉಗ್ರರ ವಿರುದ್ಧದ ಹೋರಾಟವನ್ನು ಮುಂದುರವೆಸಲಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸರ್ಕಾರಗಳಿಗೆ ಅಮೆರಿಕ ಸಂಪೂರ್ಣ ನೆರವು ನೀಡಲಿದೆ ಎಂದರು.

Comments are closed.