ಅಂತರಾಷ್ಟ್ರೀಯ

ಐಫೋನ್‍ಗೆ ಸ್ಪರ್ಧೆ ನೀಡಲು ಗೂಗಲ್ ಕಂಪೆನಿಯಿಂದ ಎರಡು ಫೋನ್ ಬಿಡುಗಡೆ

Pinterest LinkedIn Tumblr

googleಸ್ಯಾನ್‍ಫ್ರಾನ್ಸಿಸ್ಕೋ: ಗೂಗಲ್ ಕಂಪೆನಿ ಇದೇ ಮೊದಲ ಬಾರಿಗೆ ಆಪಲ್‍ನ ಐಫೋನ್‍ಗೆ ಸ್ಪರ್ಧೆ ನೀಡಲು ತನ್ನದೇ ಬ್ರಾಂಡ್‍ನ ಎರಡು ಫೋನ್‍ಗಳನ್ನು ಬಿಡುಗಡೆ ಮಾಡಿದೆ.

ಗೂಗಲ್ ಪಿಕ್ಸೆಲ್ ಮತ್ತು ಗೂಗಲ್ ಪಿಕ್ಸೆಲ್ ಎಕ್ಸ್ ಎಲ್ ಹೆಸರಿನಲ್ಲಿ ನೂತನ ಫೋನ್‍ಗಳನ್ನು ಬಿಡುಗಡೆ ಮಾಡಿದ್ದು ಅಕ್ಟೋಬರ್ 13ರಿಂದ ಪ್ರೀ ಆರ್ಡರ್ ಆರಂಭವಾಗಲಿದೆ. ಅಮೆರಿಕ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾದಲ್ಲಿ ಈಗಾಗಲೇ ಪ್ರಿ ಆರ್ಡರ್ ಆರಂಭವಾಗಿದೆ.

ಎರಡು ಫೋನ್‍ಗಳು 32 ಜಿಬಿ ಮತ್ತು 128 ಜಿಬಿ ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ. ಗೂಗಲ್ ಪಿಕ್ಸೆಲ್ 5 ಇಂಚಿನ ಸ್ಕ್ರೀನ್ ಹೊಂದಿದರೆ, ಪಿಕ್ಸೆಲ್ ಎಕ್ಸ್ ಎಲ್ 5.5 ಇಂಚಿನ ಸ್ಕ್ರೀನ್ ಹೊಂದಿದೆ.

ಗೂಗಲ್ ಕಂಪೆನಿ ಹೇಳುವಂತೆ ಇದಕ್ಕೆ ಅತ್ಯುತ್ತಮ ಬ್ಯಾಟರಿಯನ್ನು ನೀಡಿದ್ದು 15 ನಿಮಿಷ ಚಾರ್ಜ್ ಮಾಡಿದರೆ 7 ಗಂಟೆ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಹೇಳಿದೆ.

ಸ್ಮಾರ್ಟ್‍ಫೋನ್‍ಗಳ ಪೈಕಿ ಅತ್ಯುತ್ತಮ ಕ್ಯಾಮೆರಾವನ್ನು ಗೂಗಲ್ ಈ ಫೋನಿಗೆ ನೀಡಿದೆ. ಕ್ಯಾಮೆರಾ ಗುಣಮಟ್ಟದ DxOMark ಪರೀಕ್ಷೆಯಲ್ಲಿ ಈ ಎರಡು ಕ್ಯಾಮೆರಾಗಳು 89 ಅಂಕಗಳನ್ನು ಸಂಪಾದಿಸಿದೆ. ಅಷ್ಟೇ ಅಲ್ಲದೇ ಈ ಫೋಟೋಗಳಿಗೆ ‘ಗೂಗಲ್ ಫೋಟೋ’ದಲ್ಲಿ ಅನ್‍ಲಿಮಿಟೆಡ್ ಸ್ಟೋರೇಜ್ ನೀಡಿದೆ.

ಫೋನ್‍ಗಳ ಫ್ಲಾಶ್, ಎಕ್ಸ್ ಪೋಶರ್, ಕಾಂಟ್ರಾಸ್ಟ್, ಬಣ್ಣ, ಅಟೋಫೋಕಸ್, ಧ್ವನಿಯನ್ನು ಲೆಕ್ಕ ಹಾಕಿ DxOMark ಸ್ಕೋರ್ ನೀಡುತ್ತದೆ.

ಗುಣವೈಶಿಷ್ಟ್ಯಗಳು:
ಗೂಗಲ್ ಪಿಕ್ಸೆಲ್ ಎಕ್ಸ್ ಎಲ್: ಸಿಂಗಲ್ ನ್ಯಾನೋ ಸಿಮ್, 5.5 ಇಂಚಿನ ಅಮೊಲೆಡ್ ಸ್ಕ್ರೀನ್(1440*2560 ಪಿಕ್ಸೆಲ್, 534 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್ 4) ಆಂಡ್ರಾಯ್ಡ್ ನೂಗಟ್ ಓಎಸ್, 1.6GHz ಕ್ವಾಲಕಂ ಸ್ನಾಪ್ ಡ್ರಾಗನ್ ಪ್ರೊಸೆಸರ್, 4 ಜಿಬಿ ರಾಮ್, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ, 32/ 128 ಜಿಬಿ ಆಂತರಿಕ ಮೆಮೊರಿ, 12 ಎಂಪಿ ಹಿಂದುಗಡೆ ಕ್ಯಾಮರಾ, ಮುಂದುಗಡೆ 8 ಎಂಪಿ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್, 168 ಗ್ರಾಂ ತೂಕ, ತೆಗೆಯಲು ಸಾಧ್ಯವಿಲ್ಲದ 3450 ಎಂಎಎಚ್ ಬ್ಯಾಟರಿ

ಗೂಗಲ್ ಪಿಕ್ಸೆಲ್:
ಸಿಂಗಲ್ ನ್ಯಾನೋ ಸಿಮ್, 5 ಇಂಚಿನ ಅಮೊಲೆಡ್ ಸ್ಕ್ರೀನ್(1920*1080 ಪಿಕ್ಸೆಲ್, 441 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್ 4) ಆಂಡ್ರಾಯ್ಡ್ ನೂಗಟ್ ಓಎಸ್, 1
1.6GHz ಕ್ವಾಲಕಂ ಸ್ನಾಪ್ ಡ್ರಾಗನ್ ಪ್ರೊಸೆಸರ್, 4 ಜಿಬಿ ರಾಮ್, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ, 32/ 128 ಜಿಬಿ ಆಂತರಿಕ ಮೆಮೊರಿ, 12 ಎಂಪಿ ಹಿಂದುಗಡೆ ಕ್ಯಾಮರಾ, ಮುಂದುಗಡೆ 8 ಎಂಪಿ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್, 143 ಗ್ರಾಂ ತೂಕ, ತೆಗೆಯಲು ಸಾಧ್ಯವಿಲ್ಲದ 2770 ಎಂಎಎಚ್ ಬ್ಯಾಟರಿ.

ಭಾರತದಲ್ಲಿ ಬೆಲೆ ಎಷ್ಟು?
ಗೂಗಲ್ ಪಿಕ್ಸೆಲ್ 32 ಜಿಬಿಯ ಫೋನ್‍ಗೆ 57,000 ರೂ. 128 ಜಿಬಿಯ ಫೋನಿಗೆ 66,000 ರೂ. ನಿಗದಿ ಮಾಡಿದೆ. ಪಿಕ್ಸೆಲ್ ಎಕ್ಸ್ ಎಲ್ 67,000 ರೂ. ನಿಗದಿ ಮಾಡಿದೆ 128 ಜಿಬಿಯ ಫೋನಿಗೆ 76,000 ರೂ. ನಿಗದಿ ಮಾಡಿದೆ

ಗೂಗಲ್ ಇಲ್ಲಿಯವರೆಗೆ ಸಾಫ್ಟ್ ವೇರ್ ಕಡೆಗೆ ಹೆಚ್ಚಿನ ಗಮನ ನೀಡುತಿತ್ತು. ಈ ಕಾರಣಕ್ಕೆ ತನ್ನ ನೆಕ್ಸಸ್ ಮತ್ತು ಮೋಟೋ ಸರಣಿಯ ಫೋನ್‍ಗಳನ್ನು ಸ್ಮಾರ್ಟ್ ಫೋನ್ ತಯಾರಕ ಕಂಪೆನಿಗಳ ಮೂಲಕ ಬಿಡುಗಡೆ ಮಾಡಿಕೊಂಡು ಬಂದಿತ್ತು. ಈ ಫೋನ್‍ಗಳಿಗೆ ಪ್ಯೂರ್ ಆಂಡ್ರಾಯ್ಡ್ ಓಎಸ್ ನೀಡುತಿತ್ತು. ಆದರೆ ಐಫೋನ್ ದುಬಾರಿಯಾದರೂ ಜನ ಈ ಫೋನ್ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಆಪಲ್‍ಗೆ ಸ್ಪರ್ಧೆ ನೀಡಲು ಗೂಗಲ್ ಈಗ ತನ್ನದೇ ಬ್ರಾಂಡ್‍ನಲ್ಲಿ ದುಬಾರಿ ಫೋನ್ ಬಿಡುಗಡೆ ಮಾಡಿದೆ. ಗೂಗಲ್ ಪಿಕ್ಸೆಲ್, ನೆಕ್ಸಸ್, ಮೋಟೋ ಫೋನ್ ಖರೀದಿಸಿದ ಗ್ರಾಹಕರಿಗೆ ಆಂಡ್ರಾಯ್ಡ್ ಅಪ್‍ಡೇಟ್ ಬೇಗನೇ ಸಿಗುತ್ತದೆ. ಉಳಿದ ಫೋನ್‍ಗಳಿಗೆ ಅಪ್‍ಡೇಟ್ ತಡವಾಗಿ ಸಿಗುತ್ತದೆ.

Comments are closed.