ಕರ್ನಾಟಕ

ಬಿಪಿಎಲ್ ಕಾರ್ಡ್‌ಗೆ 3 ತಿಂಗಳ ಕೂಪನ್

Pinterest LinkedIn Tumblr

bpl_card_radduಬೆಂಗಳೂರು, ಅ. ೫- ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರುದಾರರಿಗೆ ಈ ತಿಂಗಳಿನಿಂದ 3 ತಿಂಗಳ ಕೂಪನ್‌ನ್ನು ಒಟ್ಟಿಗೆ ನೀಡಲು ನಿರ್ಧರಿಸಿದ್ದು, ಇದರಿಂದಾಗಿ ಕೂಪನ್‌ ಕೇಂದ್ರಗಳಿಗೆ ಅಲೆದಾಡುವುದು ತಪ್ಪಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಇಂದು ಇಲ್ಲಿ ಹೇಳಿದ್ದಾರೆ.
ಈ ತಿಂಗಳ ಒಂದನೇ ತಾರೀಖಿನಿಂದ ಮೊಬೈಲ್ ಮೂಲಕವೂ ಕೂಪನ್ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. 161 ಸಂಖ್ಯೆಗೆ ಡಯಲ್ ಮಾಡಿ ಅಲ್ಲಿ ಹೇಳುವ ಸೂಚನೆಯಂತೆ ಪಾಲಿಸಿದರೆ ಮೊಬೈಲ್‌ಗೆ ನೇರವಾಗಿ ಕೂಪನ್ ಸಂಖ್ಯೆ ಬರುತ್ತದೆ ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಗೋಧಿಗೆ ಪರ್ಯಾಯವಾಗಿ ಅಕ್ಕಿ
ಕೆಲವು ಪಡಿತರದಾರರು ಗೋಧಿಯನ್ನು ಕೊಂಡೊಯ್ಯುವುದಿಲ್ಲ. ಗೋಧಿಗೆ ಬದಲಾಗಿ ಅಕ್ಕಿ ನೀಡುವಂತೆ ಒತ್ತಾಯಿಸುತ್ತಿದ್ದರು. ಅದರಂತೆ ಮುಂದಿನ ತಿಂಗಳಿಂದ ಗೋಧಿಯ ಬದಲು ಅಷ್ಟೇ ಪ್ರಮಾಣದ ಅಕ್ಕಿಯನ್ನು ನೀಡಲಾಗುವುದು. ರಾಗಿ ವಿತರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಖಾದರ್ ಸ್ಪಷ್ಟಪಡಿಸಿದರು.
ಹೊಸ ಪಡಿತರಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕುವ ವ್ಯವಸ್ಥೆ ಇನ್ನು ಒಂದೂವರೆ ತಿಂಗಳಲ್ಲಿ ಆರಂಭಗೊಳ್ಳಲಿದೆ. ಪಡಿತರ ಚೀಟಿದಾರರಿಗೆ ತೊಗರಿಬೇಳೆ ನೀಡಲು ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಹೇಳಿದ ಅವರು, ಕಡಿಮೆ ಗುಣಮಟ್ಟದ ಅಕ್ಕಿಯನ್ನು ವಿತರಿಸಿದರೆ ಅಲ್ಲಿನ ಆಹಾರ ನಿರೀಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Comments are closed.