ಅಂತರಾಷ್ಟ್ರೀಯ

ಡೆಂಟಲ್ ಫಿಲ್ಲಿಂಗ್ ನಿಂದ ಕಿಡ್ನಿ, ಹೃದಯ ಸಮಸ್ಯೆ

Pinterest LinkedIn Tumblr

dentalವಾಷಿಂಗ್ಟನ್: ಡೆಂಟಲ್ ಫಿಲ್ಲಿಂಗ್ ಮಾಡಿಸಿಕೊಂಡವರು ಮೆದುಳು, ಕಿಡ್ನಿ ಹಾಗೂ ಹೃದಯದ ಸಮಸ್ಯೆಗೆ ತುತ್ತಗುವ ಸಂಭವ ಹೆಚ್ಚು ಅಂತ ಹೊಸ ಅಧ್ಯಯನ ತಿಳಿಸಿದೆ.

ಡೆಂಟಲ್ ಸರ್ಫೇಸ್ ರೀಸ್ಟೋರೇಷನ್‍ಸರ್ ಅಂದರೆ ಡೆಂಟಲ್ ಫಿಲ್ಲಿಂಗ್ ಮಾಡುವಾಗ ಪಾದರಸ, ಬೆಳ್ಳಿ, ಟಿನ್ ಮತ್ತು ಇನ್ನಿತರ ಲೋಹಗಳನ್ನ ಬಳಸಲಾಗುತ್ತದೆ. ಇದರಿಂದ ರಕ್ತದಲ್ಲಿ ಪಾದರಸದ ಅಂಶ ಹೆಚ್ಚಾಗಿ ಕಿಡ್ನಿ, ಹೃದಯ ಮತ್ತು ಮೆದುಳಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅಮೆರಿಕದ ಜಾರ್ಜಿಯಾ ವಿಶ್ವವಿದ್ಯಾಲಯದ ಅಧ್ಯಯನ ವರದಿ ತಿಳಿಸಿದೆ. ಸುಮಾರು 15 ಸಾವಿರ ಜನರಿಂದ ಮಾಹಿತಿ ಪಡೆದು ವಿಶ್ಲೇಷಣೆ ನಡೆಸಿ ಈ ಅಧ್ಯಯನ ವರದಿ ಮಂಡಿಸಿದ್ದಾರೆ.

ಡೆಂಟಲ್ ಫಿಲ್ಲಿಂಗ್‍ನಿಂದ ಪದರಸದ ಪ್ರಮಾಣ ಹೆಚ್ಚುತ್ತದೆ ಎನ್ನುವುದು ಹೊಸ ಸಂಗತಿಯೇನಲ್ಲ. ಆದ್ರೆ ಈ ಹಿಂದೆ ನಡೆದ ಅಧ್ಯಯನಗಳು ಸೀಮಿತವಾಗಿದ್ದವು. ಎಷ್ಟು ಪ್ರಮಾಣದಲ್ಲಿ ಪಾದರಸ ಹೆಚ್ಚುತ್ತದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಈಗ ನಡೆದಿರುವ ಅಧ್ಯಯನ ಸಹಾಯಕವಾಗಲಿದೆ ಅಂತ ಸಂಶೋಧನಾ ಲೇಖಕ ಲೀ ಯಿನ್ ಹೇಳಿದ್ದರೆ.

ಸಂಶೋಧನಾಕಾರರು ಹಲವು ರೀತಿಯ ಪಾದರಸದ ಪ್ರಮಾಣ ಹೆಚ್ಚಳವಾಗುವ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಡೆಂಟಲ್ ಫಿಲ್ಲಿಂಗ್‍ನಿಂದ ಅತ್ಯಂತ ವಿಷಕಾರಿಯಾದ ಮೀಥಲ್ ಪಾದರಸದ ಪ್ರಮಾಣ ಹೆಚ್ಚಾಗುವ ಬಗ್ಗೆ ಹೇಳಿದ್ದಾರೆ. ಪಾದರಸ ದೇಹಕ್ಕೆ ವಿಷಕರಿ ಎನ್ನುವುದು ತಿಳಿದಿರುವ ವಿಷಯವೇ. ಆದರೆ ಅದರ ಪ್ರಮಾಣದ ಆಧಾರದ ಮೇಲೆ ಅದರಿಂದಾಗುವ ಪರಿಣಾಮ ಭಿನ್ನವಾಗಿರುತ್ತದೆ. ಒಂದು ಬಾರಿ ಡೆಂಟಲ್ ಫಿಲ್ಲಿಂಗ್ ಮಾಡಿಸಿಕೊಂಡರೆ ಅಷ್ಟೇನೂ ತೊಂದರೆಯಿಲ್ಲ. ಆದ್ರೆ 8ಕ್ಕಿಂತ ಹೆಚ್ಚು ಬಾರಿ ಡೆಂಟಲ್ ಫಿಲ್ಲಿಂಗ್ ಮಾಡಿಸಿಕೊಂಡವರ ರಕ್ತದಲ್ಲಿ ಸಾಮಾನ್ಯಕ್ಕಿಂತ ಶೇ 150ರಷ್ಟು ಹೆಚ್ಚು ಪಾದರಸದ ಪ್ರಮಾಣ ಇರುತ್ತದೆ. ಇದರಿಂದಾಗಿ ಕಿಡ್ನಿ, ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ತೊಂದರೆಗಳಿಗೆ ತುತ್ತಾಗಬಹುದು ಎಂದು ಈ ಅಧ್ಯಯನ ಹೇಳಿದೆ.

Comments are closed.