ಅಂತರಾಷ್ಟ್ರೀಯ

ಸ್ಯಾಮ್‍ಸಂಗ್‍ನ ವಾಷಿಂಗ್ ಮಶೀನ್ ಸ್ಫೋಟ

Pinterest LinkedIn Tumblr

washing-machineವಾಷಿಂಗ್ಟನ್: ಕಳೆದ ತಿಂಗಳಿನಿಂದೀಚೆಗೆ ಸ್ಯಾಮ್‍ಸಂಗ್‍ನ ಗ್ಯಾಲಕ್ಸಿ ನೋಟ್-7 ಫೋನುಗಳ ಬ್ಯಾಟರಿ ಸ್ಫೋಟಗೊಂಡ ಸಾಕಷ್ಟು ಪ್ರಕರಣಗಳು ವರದಿಯಾಗಿ ಭಾರೀ ಸುದ್ದಿಯಾಗಿದೆ. ಇದೀಗ ಅಮೆರಿಕದಲ್ಲಿ ಕೆಲವು ಗ್ರಾಹಕರ ಮನೆಯಲ್ಲಿ ಸ್ಯಾಮ್‍ಸಂಗ್ ವಾಷಿಂಗ್ ಮಶೀನ್ ಸ್ಫೋಟಗೊಂಡಿದ್ದು ಸಂಸ್ಥೆಯ ವಿರುದ್ಧ ಕಾನೂನು ಹೋರಾಟಕ್ಕಿಳಿದಿದ್ದಾರೆ.

ಮಾರ್ಚ್ 2011 ರಿಂದ ಏಪ್ರಿಲ್ 2016ರ ಅವಧಿಯಲ್ಲಿ ತಯಾರಾದ ಕೆಲವು ಟಾಪ್ ಲೋಡ್ ವಾಷಿಂಗ್ ಮಶೀನ್‍ಗಳಲ್ಲಿ ದೋಷವಿದ್ದು ಸ್ಫೋಟಗೊಂಡಿರುವುದಾಗಿ ವರದಿಯಾಗಿದೆ.

ಜಾರ್ಜಿಯಾ ನಿವಾಸಿ ಮೆಲಿಸಾ ಎಂಬಾಕೆ ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ವಾಷಿಂಗ್ ಮಶೀನ್ ಬಾಂಬ್‍ನಂತೆ ಸದ್ದು ಮಾಡಿತು. ಅದು ಸ್ಫೋಟಗೊಂಡ ಸದ್ದು ಕೇಳಿಸಿದಾಗ ನನ್ನ 4 ವರ್ಷದ ಮಗ ವಾಷಿಂಗ್ ಮಶೀನ್ ಬಳಿಯೇ ಇದ್ದ. ನಾನು ಕೂಡಲೇ ತನ್ನ ತಲೆಯನ್ನು ಮುಚ್ಚಿಕೊಂಡು ಮಗನ ಮೇಲೆ ಬಿದ್ದೆ ಅಂತ ಹೇಳಿದ್ದಾರೆ. ಟೆಕ್ಸಾಸ್ ಹಾಗೂ ಇಂಡಿಯಾನಾದಲ್ಲಿಯೂ ಕೂಡ ವಾಷಿಂಗ್ ಮಶೀನ್ ಸ್ಫೋಟಗೊಂಡ ಬಗ್ಗೆ ಗ್ರಾಹಕರು ತಿಳಿಸಿದ್ದಾರೆ.

ದೋಷಯುಕ್ತ ವಾಷಿಂಗ್ ಮಶೀನ್‍ಗಳಲ್ಲಿ ಬೆಡ್‍ಶೀಟ್ ಅಥವಾ ಇನ್ಯಾವುದೇ ಭಾರವಾದ ಬಟ್ಟೆಗಳನ್ನು ಹಾಕಿದಾಗ ವೈಬ್ರೇಷನ್ ಉಂಟಾಗಿ ಸಮಸ್ಯೆಯಾಗುತ್ತದೆ. ಹೀಗಾಗಿ ಗ್ರಾಹಕರು ಅಂತಹ ಬಟ್ಟೆಯನ್ನು ಹಾಕಿದಾಗ ಲೋವರ್ ಸ್ಪೀಡ್ ಡೆಲಿಕೇಟ್ ಸೈಕಲ್ ಆಯ್ಕೆಯನ್ನು ಬಳಸಬೇಕು. ಹೆಚ್ಚಿನ ಮಾಹಿತಿಗೆ ಸ್ಯಾಮ್‍ಸಂಗ್ ವೆಬ್‍ಸೈಟ್‍ಗೆ ಭೇಟಿ ನೀಡಿ ಎಂದು ಕಂಪೆನಿ ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಿರೋ ಸ್ಯಾಮ್‍ಸಂಗ್ ಸಂಸ್ಥೆಯ ವಕ್ತಾರರು, ನಾರ್ತ್ ಅಮೆರಿಕದಲ್ಲಿ ಮಾರಾಟವಾದ ವಾಷಿಂಗ್ ಮಶೀನ್‍ಗಳಲ್ಲಿ ಈ ರೀತಿಯ ಸಮಸ್ಯೆ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಆದರೆ ದಿನನಿತ್ಯದ ಬಟ್ಟೆಗಳನ್ನು ಹಾಕಿದಾಗಲೂ ವಾಷಿಂಗ್ ಮಶೀನ್ ಸ್ಫೋಟಗೊಂಡ ಬಗ್ಗೆ ಅಮೆರಿಕದ ಗ್ರಾಹಕರು ಆರೋಪಿಸಿದ್ದು, ಸ್ಯಾಮ್‍ಸಂಗ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.

Comments are closed.