ಅಂತರಾಷ್ಟ್ರೀಯ

ಭಾರತೀಯ ಸೇನೆಯಿಂದ ಸರ್ಜಿಕಲ್ ಕಾರ್ಯಾಚರಣೆ: ಪಾಕ್ ಪ್ರಧಾನಿ ಖಂಡನೆ

Pinterest LinkedIn Tumblr

Nawaz-Sharifಇಸ್ಲಾಮಾಬಾದ್(ಸೆ.29): ಭಾರತೀಯ ಸೇನೆ ಏಕಾಏಕಿ ಪಾಕಿಸ್ತಾನ ಗಡಿದಾಟಿ ಕಾರ್ಯಾಚರಣೆ ನಡೆಸಿರುವುದು ಅಪ್ರಚೋದಿತ ಹಾಗೂ ಲಜ್ಜೆಗೆಟ್ಟ ನಡೆಯಾಗಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಪ್ ಹೇಳಿದ್ದಾರೆ.
ನಮ್ಮ ಸೇನೆ ದೇಶದ ಭದ್ರತೆಯನ್ನು ಕಾಪಾಡಿಕೊಳ್ಳಲು ಸಶಕ್ತವಾಗಿದೆ. ನಾವು ಯಾವಾಗಲೂ ನೆರೆರಾಷ್ಟ್ರಗಳೊಂದಿಗೆ ಶಾಂತಿಯುತವಾಗಿರಲು ಬಯಸುತ್ತೇವೆ. ಇದನ್ನೇ ನಮ್ಮ ದೌರ್ಬಲ್ಯವೆಂದು ಭಾವಿಸಬಾರದು ಎಂದಿದ್ದಾರೆ ರೇಡಿಯೋ ಪಾಕಿಸ್ತಾನ್ ವರದಿ ಮಾಡಿದೆ.
ದೇಶದ ಸಾರ್ವಭೌಮತೆಗೆ ಭಂಗ ತರುವಂತಹ ಹೇಯಕೃತ್ಯಗಳನ್ನು ವಿಫಲಗೊಳಿಸಲು ಪಾಕಿಸ್ತಾನ ಶಕ್ತವಾಗಿದೆ. ಆದರೆ ಅಪ್ರಚೋದಿತವಾಗಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಕಾರ್ಯಾಚರಣೆ ನಡೆಸಿರುವ ಕ್ರಮವನ್ನು ಖಂಡಿಸುತ್ತೇನೆ. ನಾವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ದರಿದ್ದೇವೆ ಎಂದು ಎಂದು ಷರೀಪ್ ಹೇಳಿದ್ದಾರೆ.
ಭಾರತೀಯ ಸೇನೆ ಪಾಕಿಸ್ತಾನದ ಇಬ್ಬರು ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಗಡಿ ನಿಯಂತ್ರಣ ರೇಖೆ ಅತಿಕ್ರಮಿಸಿ ಈ ಕಾರ್ಯಾಚರಣೆ ನಡೆಸಿರುವುದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಕ್ ಸೇನೆ ಆರೋಪಿಸಿದೆ.

Comments are closed.