ಲಂಡನ್ : ಸಾಮಾನ್ಯವಾಗಿ ಬಸ್ ತಪ್ಪಿ ಹೋದರೆ ಬೆನ್ನಟ್ಟಿ ಓಡಿದರೆ ನಿರ್ವಾಹಕ ನೋಡಿದರೆ ನಿಲ್ಲಿಸಿ ಹತ್ತಿಸಿಕೊಳ್ಳಬಹುದು. ಆದರೆ ಸ್ಪೇನ್‌ನಲ್ಲೊಬ್ಬ ಭೂಪ ತಡವಾಗಿ ಬಂದು ನಿಲ್ಲಿಸಿ..ನಿಲ್ಲಿಸಿ.. ಎಂದು ಟಾರ್ಮ್ಯಾಕ್ ನಲ್ಲಿ ಟೆಕ್ ಆಫ್ ಆದ ವಿಮಾನದ ಬೆನ್ನಟ್ಟಿ ಓಡಿದ ವಿಲಕ್ಷಣ ಘಟನೆ ನಡೆದಿದೆ.
ಮ್ಯಾಡ್ರಿಡ್ ವಿಮಾನ ನಿಲ್ದಾಣದಲ್ಲಿ ಅಗಸ್ಟ್ 5 ರಂದು ಈ ಘಟನೆ ನಡೆದಿದ್ದು, ತಡವಾಗಿ ಬಂದ ಭೂಪ ಭದ್ರತಾ ಪರಿಶೀಲನೆ ಎಲ್ಲ ಮುಗಿಸಿ ಬರುವ ವೇಳೆ ಗ್ರಾನ್ ಕೆನಾರಿಯಾಕ್ಕೆ ತೆರಳುವ ರ್ಯಾನ್ ಏರ್ ವಿಮಾನ ಹಾರಾಟ ಆರಂಭಿಸಿತ್ತು. ದಾರಿ ಕಾಣದಾದ ಆತ ಆವೇಶದಲ್ಲಿ ಜೆಟ್ ಬ್ರಿಡ್ಜ್ ನಿಂದ 10 ಅಡಿಗಳಷ್ಟು ಕೆಳಕ್ಕೆ ಹಾರಿದ್ದಾನೆ. ಬ್ಯಾಗ್‌ಗಳನ್ನು ಹಿಡಿದು ಭದ್ರತಾ ನಿಯಮಾವಳಿಗಳನ್ನು ಉಲ್ಲಂಘಿಸಿ ಟಾರ್ಮ್ಯಾಕ್ ನಲ್ಲಿ ವಿಮಾನದ ಬೆನ್ನಟ್ಟಿ ಓಡಿದ್ದಾನೆ. ಕೊನೆಗೂ ವಿಮಾನ ನಿಲ್ಲದಾಗ ತಲೆ ಮೆಲೆ ಕೈಯಿಟ್ಟು ಕುಳಿತಿದ್ದಾನೆ.
ಈ ದೃಶ್ಯಗಳ ವಿಡಿಯೋವನ್ನು ಏರ್‌ಪೋರ್ಟ್ ಸಿಬ್ಬಂದಿಯೊಬ್ಬ ಸೆರೆ ಹಿಡಿದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ಅದೀಗ ವೈರಲ್ ಆಗಿದೆ.
ವಿಮಾನ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ. ಆದರೂ ಭಧ್ರತಾ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಆತನ ಮೇಲೆ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ ಎಂದು ದ ಗಾರ್ಡಿಯನ್ ವರದಿ ಮಾಡಿದೆ.
-ಉದಯವಾಣಿ
Comments are closed.