ನ್ಯೂಯಾರ್ಕ್: ಇಂದು ಮಹಿಳೆಯರು ತಮ್ಮ ಶರೀರವನ್ನು ಇದ್ದ ಹಾಗೆ ಸ್ವೀಕರಿಸುವ ಮನಸ್ಥಿತಿ ಹೊಂದಿರುತ್ತಾರೆ,ಅದರಲ್ಲೂ ದೇಹದ ತೂಕದ ವಿಚಾರದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಕಾಳಜಿ ಕಡಿಮೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ನಮ್ಮ ಆಹಾರ ಸೇವನೆಯಲ್ಲಿ ವ್ಯತ್ಯಾಸವಾದರೆ ಅದು ಶಾರೀರಿಕವಾಗಿ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲದೆ ಮನುಷ್ಯನಲ್ಲಿ ಖಿನ್ನತೆ ಬೆಳೆಯಲು ಕೂಡ ಇದು ಕಾರಣವಾಗುತ್ತದೆ.ನಮ್ಮ ಶರೀರ ಚೆನ್ನಾಗಿಲ್ಲದಿದ್ದರೆ ತಿನ್ನುವ ಆಹಾರ ಕ್ರಮದಲ್ಲಿಯೂ ವ್ಯತ್ಯಾಸವಾಗುತ್ತದೆ.
ದೇಹದ ಶಕ್ತಿ ವಿಚಾರ ಬಂದಾಗ ಪುರುಷರು ಮಹಿಳೆಯರಿಗಿಂತ ಹೆಚ್ಚು ಅಸಂತೃಪ್ತರಾಗಿರುತ್ತಾರೆ.ಆದರೆ ಮಹಿಳೆ ಮತ್ತು ಪುರುಷರಿಗೆ ಹೋಲಿಸಿದರೆ ದೀರ್ಘಾವಧಿಯಲ್ಲಿ ದೇಹದ ಶಕ್ತಿ ವಿಚಾರ ಬಂದಾಗ ಒಂದೇ ಸಮನೆ ಇರುತ್ತಾರೆ.
ದೇಹದ ತೂಕ ವಿಷಯದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಅಸಂತುಷ್ಟರಾಗಿರುತ್ತಾರೆ. ಆ ಅಸಂತೃಪ್ತಿ ನಮ್ಮ 31 ವರ್ಷಗಳ ಅಧ್ಯಯನದಲ್ಲಿ ಕಡಿಮೆಯಾಗಿದೆ ಎನ್ನುತ್ತಾರೆ ವೂಸ್ಟರ್ ಕಾಲೇಜಿನ ಸಂಶೋಧಕ ಬ್ರಿಯಾನ್ ಕರಾಝ್ ಸಿಯಾ.
ಸಂಶೋಧಕರು ತಮ್ಮ ಸಂಶೋಧನೆಗೆ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಬಳಸಿದ್ದಾರೆ. ಪುರುಷರು ಮತ್ತು ಮಹಿಳೆಯರು ತಮ್ಮ ಶರೀರ, ದೇಹದ ತೂಕ ಇತ್ಯಾದಿಗಳನ್ನು ವಿಶ್ಲೇಶಿಸಿದ್ದಾರೆ. 250ಕ್ಕೂ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಮಹಿಳೆಯರು ತಮ್ಮ ಶಾರೀರಿಕ ಸ್ಥಿತಿಗತಿ ವಿಷಯದಲ್ಲಿ ಅಸಂತೃಪ್ತಿ ಹೊಂದಿರುವುದು ಕಡಿಮೆಯಾದರೆ, ಪುರುಷರಲ್ಲಿ ಯಥಾಸ್ಥಿತಿ ಇರುತ್ತದೆ.
ಇನ್ನು ಮಹಿಳೆಯರು ಮತ್ತು ಪುರುಷರ ಶಕ್ತಿ ವಿಷಯವಾಗಿ ಸಂಶೋಧಕರು 14 ವರ್ಷಗಳ ಕಾಲ 81 ಬಾರಿ ಅಧ್ಯಯನ ನಡೆಸಿದ್ದಾರೆ. 23 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.
ಪುರುಷರು ತಮ್ಮ ದೇಹದ ತೂಕದ ಜೊತೆಗೆ ಶಕ್ತಿಗೂ ಗಮನ ಕೊಡುತ್ತಾರೆ ಎಂದು ಹೇಳಿರುವ ಸಂಶೋಧಕರು ತಮ್ಮ ಶರೀರದ ಬಗ್ಗೆ ಜನರಿಗೆ ಅಸಮಾಧಾನ, ಅಸಂತೃಪ್ತಿ ಬೆಳೆಯಬೇಕು.
ಆದರೆ ಅದಕ್ಕೆ ವಿರುದ್ಧವಾಗಿ ನಾವು ನೋಡುತ್ತೇವೆ. ಕಳೆದೆರಡು ದಶಕಗಳಿಂದೀಚೆಗೆ ದೇಹದ ರಚನೆಯನ್ನು ಇದ್ದ ಹಾಗೆ ಒಪ್ಪಿಕೊಳ್ಳುವ ಮನೋವೃತ್ತಿ ಮಹಿಳೆಯರು ಮತ್ತು ಹುಡುಗಿಯರಲ್ಲಿ ಬೆಳೆಯುತ್ತಿದೆ ಎಂದು ಕರ್ಜಾಜ್ಸಿಯಾ ಹೇಳುತ್ತಾರೆ.
Comments are closed.