ರಾಷ್ಟ್ರೀಯ

ಗೋವಾ: ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿದರೆ 10 ಸಾವಿರ ದಂಡ?

Pinterest LinkedIn Tumblr

drinksಪಣಜಿ: ಮೋಜು ಮಸ್ತಿಗೆ ಹೆಸರುವಾಸಿಯಾಗಿರುವ ಗೋವಾದಲ್ಲಿ ಇನ್ಮುಂದೆ ಸಾರ್ವಜನಿಕವಾಗಿ ಮದ್ಯಯಪಾನ ಮಾಡಿದರೆ 10 ಸಾವಿರ ದಂಡ ತೆರಬೇಕಾಗುತ್ತದೆ.

ಬೀಚ್, ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸಾರ್ವಜನಿಕ ಪ್ರದೇಶಗಳಗಳಲ್ಲಿ ಪ್ರವಾಸಿಗರು ಮದ್ಯಪಾನ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಅಬಕಾರಿ ಕಾನೂನಿಗೆ ಹೊಸ ತಿದ್ದುಪಡಿ ತರಲು ಮುಂದಾಗಿದೆ. ಈ ತಿದ್ದುಪಡಿಗೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡರೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿದವರಿಗೆ 10 ಸಾವಿರ ದಂಡ ವಿಧಿಸಲಾಗುತ್ತದೆ.

ಗೋವಾ ಅಬಕಾರಿ ಸುಂಕ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಮುಂಗಾರು ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಂಡನೆ ಮಾಡುವ ಸಾಧ್ಯತೆ ಇದೆ.

Comments are closed.