ಅಂತರಾಷ್ಟ್ರೀಯ

ಈಶಾನ್ಯ ಚೀನಾದಲ್ಲಿ 3000 ವರ್ಷ ಹಳೆಯ ‘ಯೂ’ ಮರ ಪತ್ತೆ

Pinterest LinkedIn Tumblr

3000-Year-Old-Tree-Found-in-China-webಬೀಜಿಂಗ್: ಸುಮಾರು 3000 ವರ್ಷಗಳಷ್ಟು ಹಳೆಯದು ಎನ್ನಲಾಗಿರುವ ಅಪರೂಪದ ಚೀನೀ ‘ಯೂ’ (ಸದಾ ಹಸಿರು) ಮರವನ್ನು ಝಿಲಿನ್ ಪ್ರಾಂತದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಇಲ್ಲಿ ಹೇಳಿದರು.

ಹುವಾಂಗ್ಗೊಯು ಕಾಡಿನಲ್ಲಿ ಈ ಜೀವಂತ ಮರವನ್ನು ಪತ್ತೆ ಹಚ್ಚಲಾಗಿದೆ. 40 ಮೀಟರ್ಗಳಿಗೂ ಹೆಚ್ಚು ಎತ್ತರ ಹಾಗೂ 1.68 ಮೀಟರ್ ವ್ಯಾಸವನ್ನು ಈ ಮರ ಹೊಂದಿದೆ ಎಂದು ಅರಣ್ಯ ಆಡಳಿತದ ಮುಖ್ಯಸ್ಥ ಯಾಂಗ್ ಯೊಂಗ್ಶೆಂಗ್ ನುಡಿದರು.

ಈ ವಾರದ ಆದಿಯಲ್ಲಿ ಪತ್ತೆ ಹಚ್ಚಲಾದ 30ಕ್ಕೂ ಹೆಚ್ಚು ‘ಯೂ’ ಮರಗಳಲ್ಲಿ ಈ ಮರವೂ ಒಂದಾಗಿದ್ದು, ಅತ್ಯುತ್ತಮ ನಿರ್ವಹಣೆ ಪಡೆದಿರುವ ಅತ್ಯಂತ ಹಳೆಯ ಮರ ಇದಾಗಿದೆ ಎಂದು ಅವರು ಹೇಳಿದರು. ಸಸ್ಯ ಜಗತ್ತಿನ ‘ಜೀವಂತ ಪಳೆಯುಳಿಕೆ’ ಎಂಬುದಾಗಿ ಈ ಮರವನ್ನು ಕರೆದಿರುವ ಅವರು ಚೀನೀ ‘ಯೂ’ ಮರಗಳಿಗೆ 25 ಲಕ್ಷ ವರ್ಷಗಳ ಇತಿಹಾಸವಿದೆ. ಬಹಳಷ್ಟು ಮರಗಳನ್ನು ಕ್ಯಾನ್ಸರ್ ಚಿಕಿತ್ಸೆ ಸಲುವಾಗಿ ‘ಟ್ಯಾಕ್ಸೋಲ್’ ತೆಗೆಯಲು ಕಟಾವು ಮಾಡಲಾಗುತ್ತದೆ. ಈಗ ಈ ಮರಗಳು ಅವಸಾನದ ಅಂಚಿನಲ್ಲಿರುವ ಮರಗಳ ಸಾಲಿಗೆ ಸೇರಿವೆ ಎಂದು ವಿವರಿಸಿದರು.

Comments are closed.