ಲಂಡನ್ : ‘ಕಾಮಾತುರಣಾಂ ನ ಭಯ ನ ಲಜ್ಜ’ ಎಂಬ ಮಾತಿಗೆ ಲಂಡನ್‌ನ ನಡು ವಯಸ್ಕ ದಂಪತಿಗಳಿಬ್ಬರು ಸಾಕ್ಷಿಯಾಗಿದ್ದಾರೆ. ಮನೆಯೊಳಗೆ ಮಾಡಬೇಕಾದುದನ್ನು ಲಜ್ಜೆ ಮರೆತು ರಸ್ತೆಯಲ್ಲಿ ಮಾಡಿ ಕ್ಯಾಮರಾದಲ್ಲಿ ಸೆರೆಯಾಗಿ ಭಾರೀ ಸುದ್ದಿಯಾಗಿದ್ದಾರೆ.
ಹೆಕಿಂಗ್ಟನ್ ಈಸ್ಟ್ ಗೇಟ್ ಎಂಬಲ್ಲಿ ಜನನಿಬಿಡ ರಸ್ತೆಯಲ್ಲಿ ಮಧ್ಯರಾತ್ರಿ ಸೋಪಿ ಬ್ರೌನ್ ಎಂಬ ಯುವತಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಬರುತ್ತಿದ್ದಳು. ಈ ವೇಳೆ ಈ ಜೋಡಿ ದೇಹದ ಮೇಲೆ ನೂಲಿನಷ್ಟೂ ಬಟ್ಟೆ ಇಲ್ಲದೆ ಸಲ್ಲಾಪದಲ್ಲಿ ತೊಡಗಿತ್ತು. ನೋಡು ನೋಡುತ್ತಿದ್ದಂತೆ ನಿಲ್ಲಿಸಿದ ಕಾರೊಂದರ ಬಾನೆಟ್ ಮೆಲೆ ಪತ್ನಿಯನ್ನು ಕೂರಿಸಿಕೊಂಡ ಭೂಪ ಸೆಕ್ಸ್ ಶುರು ಮಾಡಿಯೇ ಬಿಟ್ಟಿದ್ದಾನೆ. ರಸಮಯ ಕ್ಷಣ ನೋಡಿ ತಡ ಮಾಡದ ಸೋಪಿ ಮೊಬೈಲ್‌ನಲ್ಲಿ ತ್ವರಿತವಾಗಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾಳೆ.
‘ನಾನು ವಿಡಿಯೋ ಚಿತ್ರೀಕರಿಸಿಕೊಂಡರೂ ಜೋಡಿ ನನನ್ನು ಆಕ್ಷೇಪಿಸದೆ ತಮ್ಮ ಪಾಡಿಗೆ ತಾವು ಮುಂದುವರಿಸಿದ್ದಾರೆ.ನನಗೆ ಮೊದಲು ಸ್ವಲ್ಪ ಶಾಕ್ ಆಯಿತು. ಇಂತಹ ಚಟುವಟಿಕೆಗೆ ಹೊತ್ತು ಗೊತ್ತಿರಬೇಕು ಆದರೂ ಅದು ಅವರ ಆಯ್ಕೆಯಾಗಿದ್ದು, ಒಟ್ಟಿನಲ್ಲಿ ನನ್ನ ಪಾಲಿಗೆ ಅದು ಬೆಚ್ಚಗಿನ ರಾತ್ರಿಯಾಗಿತ್ತು’ ಎಂದು ಸೋಪಿ ಹೇಳಿಕೊಂಡಿದ್ದಾಳೆ.
ಈ ವಿಚಾರ ತಿಳಿದ ಬಳಿಕ ಪ್ರತಿಕ್ರಿಯೆ ನೀಡಿರುವ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ನಡೆಸುವುದು ಅಪರಾಧ ,ನಮಗೆ ಈ ಪ್ರಕರಣದಲ್ಲಿ ಇದುವರೆಗೆ ದೂರು ಬಂದಿಲ್ಲ. ಮುಂದೆ ಇಂತಹದ್ದು ಕಂಡರೆ 101ಕ್ಕೆ ಕರೆ ಮಾಡಿ, ನಾವು ಹುಚ್ಚು ಬಿಡಿಸುತ್ತೇವೆ ಎಂದಿದ್ದಾರೆ.
-ಉದಯವಾಣಿ
Comments are closed.