ಬೀಜಿಂಗ್: ಚೀನಾದ ಕಂಪನಿಯ ಬಾಸ್ ತಮ್ಮ ಟಾರ್ಗೆಟ್ ಪೂರೈಸದ ನೌಕರರಿಗೆ ಕಂಪನಿಯ ಸಿಬ್ಬಂದಿ ಎದುರು ಬೆತ್ತದಿಂದ ಹಿಂಭಾಗಕ್ಕೆ ನಾಲ್ಕು ಬಾರಿ ಥಳಸಿದ ಅಮಾನವೀಯ ಘಟನೆ ನಡೆದಿದೆ. ಬಾಸ್ ನೌಕರರಿಗೆ ಥಳಿಸುತ್ತಿರುವ ವಿಡಿಯೊ ಚಿತ್ರ ವೈರಲ್ ಆಗಿದ್ದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೊದಲ್ಲಿ ಶಾಂಕ್ಸಿ ಚಾಂಗ್ಜಿ ಜಾಂಗ್ಜೆ ಕೃಷಿ ಮತ್ತು ವಾಣಿಜ್ಯ ಬ್ಯಾಂಕ್‌ನ ಬಾಸ್, ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರನ್ನು ಸಾಲಾಗಿ ನಿಲ್ಲಿಸಿ ಉದ್ದನೆಯ ಬೆತ್ತದಿಂದ ಹಿಂಭಾಗಕ್ಕೆ ನಾಲ್ಕು ಬಾರಿ ಥಳಿಸಿದರು. ಉಳಿದ ಸಿಬ್ಬಂದಿ ಬಾಂಕ್ವೆಟ್ ಹಾಲ್‌ನ ಮೇಜಿನ ಮೇಲೆ ಕುಳಿತಿದ್ದರು.
ಬಾಸ್ ಮೊದಲಿಗೆ ಗುಂಪನ್ನು ಉದ್ದೇಶಿಸಿ ಮಾತನಾಡಿ ಬಳಿಕ ವೇದಿಕೆಯಲ್ಲಿ ನೌಕರರಿಗೆ ಏನೋ ಹೇಳಿದ ಬಳಿಕ ಒಂದು ನಿಮಿಷದಲ್ಲೇ ನಾಲ್ಕು ಬಾರಿ ಥಳಿಸುತ್ತಾರೆ. ಸಾಲಿನ ಕೊನೆಯಲ್ಲಿ ನಿಂತಿದ್ದ ಯುವತಿಯೊಬ್ಬಳು ನೋವಿನಿಂದ ಕಿರುಚಿ ಹಿಂಭಾಗಕ್ಕೆ ಕೈ ತೆಗೆದುಕೊಂಡು ಹೋದಾಗ ಕೈ ದೂರ ಸರಿಸುವಂತೆ ಬಾಸ್ ಕಿರುಚುತ್ತಾ ಮತ್ತೊಂದು ಬೆತ್ತದ ಏಟನ್ನು ಕೊಡುತ್ತಾರೆ.
ಈ ಘಟನೆ ನಡೆಯುತ್ತಿರುವುದು ಚೀನಾದಲ್ಲಿ ಇದು ಮೊದಲನೆ ಸಲವಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿ ತಮ್ಮ ಟಾರ್ಗೆಟ್ ಪೂರ್ಣಗೊಳಿಸದ ನೌಕರರಿಗೆ ನೆಲದಲ್ಲಿ ತೆವಳುವಂತೆ ಮಾಡಿದ ವಿಡಿಯೊ ಕೂಡ ಬೆಳಕಿಗೆ ಬಂದಿತ್ತು.
Comments are closed.