ಅಂತರಾಷ್ಟ್ರೀಯ

ಒಂದೇ ದಿನದಲ್ಲಿ $860 ಮೌಲ್ಯದ ನೇಲ್ ಪಾಲಿಶ್ ಕದ್ದ ಕಳ್ಳಿ

Pinterest LinkedIn Tumblr

nelನ್ಯೂ ಆರ್ಲಿಯನ್ಸ್: ಒಂದೇ ದಿನದಲ್ಲಿ $860 ಮೌಲ್ಯದ ನೇಲ್ ಪಾಲಿಶ್ ಕದ್ದ ಆರೋಪದ ಮೇಲೆ ನ್ಯೂ ಆರ್ಲಿಯನ್ಸ್ ಪೊಲೀಸರು 27 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ರೌಶ್ವಾನ್ ಫೋರ್ಡ್ ಎಂದು ಗುರುತಿಸಲಾಗಿದ್ದು ಆಕೆ ಸೋಮವಾರ ಒಟ್ಟು ಮೂರು ಅಂಗಡಿಗಳಿಂದ ನೇಲ್ ಪಾಲಿಶ್ ಕದ್ದಿದ್ದಾಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಆಕೆ ಹೇಗೆ ಸಿಕ್ಕಿ ಬಿದ್ದಳು ಎಂದು ಪೊಲೀಸರು ಮಾಹಿತಿ ನೀಡಿಲ್ಲ.

ಆಕೆ ತನ್ನ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿದ್ದಾಳೆಯೇ ಅಥವಾ ಇಲ್ಲವೇ ಎಂಬುದು ಕೂಡ ತಿಳಿದು ಬಂದಿಲ್ಲ.

Comments are closed.