ಅಂತರಾಷ್ಟ್ರೀಯ

ಬಾಗ್ದಾದ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 11 ಸಾವು, 32 ಮಂದಿಗೆ ಗಾಯ

Pinterest LinkedIn Tumblr

bagdad-explosionಬಾಗ್ದಾದ್: ಶಿಯಾ ಗುಂಪಿನವರು ಹೆಚ್ಚಾಗಿರುವ ಬಾಗ್ದಾದ್ ನ ಈಶಾನ್ಯ ಜಿಲ್ಲೆಯ ಹೊರಾಂಗಣ ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಆತ್ಮಹತ್ಯಾ ಬಾಂಬ್ ದಾಳಿಗೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. 32 ಮಂದಿಗೆ ಗಾಯಗಳಾಗಿವೆ.

ಇದೀಗ ನಗರದ ಸುತ್ತಮುತ್ತ ಭದ್ರತೆಗೆ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಕಳೆದ ವಾರವಷ್ಟೇ ಇಸಿಎಸ್ ಬಾಗ್ದಾದ್ ನಲ್ಲಿ ಎರಡು ಭಾರೀ ದೊಡ್ಡ ಮಟ್ಟದ ದಾಳಿ ನಡೆಸಿತ್ತು. ನಿನ್ನೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್, ಇಸಿಸ್ ಉಗ್ರಗಾಮಿಗಳನ್ನು ಸದೆಬಡಿಯಲು 560 ಹೆಚ್ಚಿನ ಪಡೆಗಳನ್ನು ಇರಾಕಿಗೆ ಕಳುಹಿಸಲಾಗುವುದು ಎಂದು ಹೇಳಿದ್ದರು.

ಸ್ಫೋಟಕವನ್ನು ಹೊತ್ತ ಟ್ರಕ್ ಇಂದು ಬೆಳಗ್ಗೆ ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗಿರುವ ಸಂದರ್ಭದಲ್ಲಿ ದಾಳಿ ನಡೆದಿದೆ. ಘಟನೆಯಲ್ಲಿ ಅನೇಕ ಕಟ್ಟಡಳು ಮತ್ತು ವಾಹನಗಳಿಗೆ ಹಾನಿಯುಂಟಾಗಿದೆ.

ತಕ್ಷಣಕ್ಕೆ ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಳ್ಳಲಿಲ್ಲ. ಆದರೆ ಇದು ಇಸಿಎಸ್ ಸಂಘಟನೆಯ ಕುಕೃತ್ಯವೆಂದು ಪೊಲೀಸರು ಹೇಳುತ್ತಾರೆ.

Comments are closed.