ಅಂತರಾಷ್ಟ್ರೀಯ

ಬಾಂಗ್ಲಾದಲ್ಲಿ ಮತ್ತೆ ಬಾಂಬ್‌ ಸ್ಫೋಟ: 4 ಸಾವು

Pinterest LinkedIn Tumblr

Soso-dhaliಢಾಕಾ (ಪಿಟಿಐ): ಬಾಂಗ್ಲಾದೇಶದ ಕಿಶೋರ್‌ಗಂಜ್‌ನಲ್ಲಿ ಗುರುವಾರ ರಂಜಾನ್‌ ಪ್ರಾರ್ಥನೆ ವೇಳೆ ಉಗ್ರರು ನಡೆಸಿದ ಬಾಂಬ್‌ ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಭದ್ರತಾ ಪಡೆ ಒಬ್ಬ ಉಗ್ರನನ್ನು ಹೊಡೆದುರುಳಿಸಿದೆ.

ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ.ಒಬ್ಬ ಉಗ್ರನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ಎರಡು ಲಕ್ಷ ಮಂದಿ ಪ್ರಾರ್ಥನೆಗೆ ಸೇರುವ ಕಿಶೋರ್‌ಗಂಜ್‌ನ ಶೋಲಾಕಿಯ ಮೈದಾನದ ಸಮೀಪ ಉಗ್ರರು ಬಾಂಬ್‌ ಸ್ಫೋಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರ ಢಾಕಾದಲ್ಲಿ ಉಗ್ರರು ದಾಳಿ ನಡೆಸಿ 20 ಮಂದಿಯನ್ನು ಕೊಂದ ಘಟನೆ ಮಾಸುವ ಮುನ್ನವೇ ಈ ಕೃತ್ಯ ನಡೆದಿದೆ. ಬಾಂಗ್ಲಾದೇಶದಲ್ಲಿ ಉಗ್ರರ ಅಟ್ಟಹಾಸ ಇತ್ತೀಚೆಗೆ ಹೆಚ್ಚಾಗಿದೆ.

Comments are closed.