ಅಂತರಾಷ್ಟ್ರೀಯ

ಅನೈತಿಕ ಸಂಬಂಧ ಹಿನ್ನೆಲೆ; ವಕೀಲನ ಮರ್ಮಾಂಗಕ್ಕೆ ಬಿತ್ತು ಕತ್ತರಿ

Pinterest LinkedIn Tumblr

marmaಜಪಾನ್ : ನಮ್ಮ ದೇಶದಲ್ಲಿ ಅತ್ಯಾಚಾರ ಪ್ರಕರಣಗಳಾದಾಗ ಆರೋಪಿಗಳ ಮರ್ಮಾಂಗವನ್ನೇ ಕತ್ತರಿಸ ಬೇಕು ಎನ್ನುವ ಬೇಡಿಕೆಯನ್ನು ಹಲವಾರು ಹೋರಾಟಗಾರರು ಕೇಳಿಕೊಂಡಿದ್ದರು. ಆದರೆ ಜಪಾನ್ ನಲ್ಲೊಬ್ಬ ಮಾಜೀ ಬಾಕ್ಸರ್ ತನ್ನ ಹೆಂಡತಿಯ ಜೊತೆ ಅನೈತಿಕ ಸಂಭಂದವನ್ನು ಇರಿಸಿಕೊಂಡಿದ್ದ ವಕೀಲನ ಮರ್ಮಾಂಗವನ್ನೇ ಕತ್ತರಿಸಿ ಜೈಲು ಪಾಲಾದನಿಗೆ ಟೋಕಿಯೋ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇಕ್ಕಿ ಕಾಟ್ಸುಗೈ ಎಂಬ 25ರ ಯುವಕ ಮಾಜೀ ಬಾಕ್ಸರ್ ಆಗಿದ್ದು ಪ್ರಸಕ್ತ ವಕೀಲಿ ವೃತ್ತಿಯನ್ನು ಅಭ್ಯಸಿಸುತ್ತಿದ್ದ. ಕಳೆದ ವರ್ಷ ಆಗಸ್ಟ್ ನಲ್ಲಿ ಆತನ ಪತ್ನಿಯ ಮೇಲೆ ಆಕೆಯ ಮೇಲಧಿಕಾರಿಯೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಮೇಲಧಿಕಾರಿಯ ಮರ್ಮಾಂಗವನ್ನೇ ಕಾಟ್ಸುಗೈ ಗಾರ್ಡನ್ ಗಿಡಗಳನ್ನು ಕತ್ತರಿಸುವ ಕತ್ತರಿಯಲ್ಲಿ ಕಟ್ ಮಾಡಿ ಪೊಲೀಸರ ಅಥಿಯಾಗಿದ್ದ.

ಪ್ರಕರಣದ ವಿಚಾರಣೆ ಮಂಗಳವಾರದಂದು ನಡೆದಿದ್ದು ಈ ವೇಳೆ ಕಾಟ್ಸುಗೈನ ಪತ್ನಿ ಹಾಗೂ ಆಕೆ ಮೇಲಧಿಕಾರಿಗೂ ಅನೈತಿಕ ಸಂಬಂಧವಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈತನಿಗೆ ನಾಲ್ಕು ವರ್ಷ ಆರು ತಿಂಗಳುಗಳ ಕಾಲ ಜೈಲುವಾಸ ಶಿಕ್ಷೆಯನ್ನು ಟೋಕಿಯೋ ನ್ಯಾಯಾಲಯ ವಿಧಿಸಿದೆ ಎಂದು ಸಾಂಕೈ ಶಿಂಬುನ್ ಪತ್ರಿಕೆ ವರಧಿ ಮಾಡಿದೆ.

ಈತನ ಹಲ್ಲೆಗೊಳಗಾದ ಅಧಿಕಾರಿಯ ಮರ್ಮಾಂಗ ಮತ್ತೆ ಸರಿಪಡಿಸಲಾದ ರೀತಿಯಲ್ಲಿ ಗಂಭೀರವಾಗಿ ಗಾಯವಾಗಿದ್ದು ಆತನಿಗೂ ಪರಿಹಾರ ನೀಡಬೇಕೆಂದು ಕೋರ್ಟ್ ಆಧೇಶಿಸಿದೆ.

Comments are closed.