
ಡಾಕಾ: ನಿನ್ನೆ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಸಂದರ್ಭ ಒತ್ತೆಯಾಳುಗಳನ್ನಾಗಿಟ್ಟುಕೊಂಡಿದ್ದ 20 ಜನರನ್ನು ಹತ್ಯೆ ಮಾಡಿರುವವರು, ಬಾಂಗ್ಲಾದೇಶದವರೇ ಆದ ಮೂಲ ಭೂತವಾದಿಗಳೇ ಹೊರತು ಇಸ್ಲಾಮಿಕ್ ಸ್ಟೇಟ್(ಐಎಸ್)ಗೆ ಸೇರಿದವರಲ್ಲ ಮತ್ತು ಅದರ ಅನುಯಾಯಿಗಳೂ ಅಲ್ಲ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ಬಾಂಗ್ಲಾ ದೇಶದಲ್ಲಿ ನಿಷೇಧಿಸಲಾಗಿರುವ ಜಮಾಯತ್- ಉಲ್-ಮುಜಾಹದೀನ್ ಬಾಂಗ್ಲಾ ದೇಶ ಸಂಘಟನೆ(ಜಿಎಂಬಿ)ಗೆ ಸೇರಿದವರಾಗಿದ್ದು , ಇವರಾರೂ ಐಎಸ್ ಬೆಂಬಲಿಗರಲ್ಲೂ ಇವರಿಗೂ ಐಎಸ್ (ಐಸಿಸ್) ಸಂಘಟನೆಗೂ ಯಾವ ಸಂಪರ್ಕವೂ ಇಲ್ಲ. ಇವರೆಲ್ಲರೂ ಬಾಂಗ್ಲಾದಲ್ಲಿಯೇ ಹುಟ್ಟಿ ಬೆಳೆದವರು ಎಂದು ಗೃಹ ಸಚಿವ ಅಸ್ಸಾದು ಜಮ್ಮಾನ್ ಖಾನ್ ಅವರು ಸ್ಪಷ್ಟಪಡಿಸಿದ್ದಾರೆ.
ಇದುವರೆಗೆ ನಡೆದ ತನಿಖೆಗಳ ಪ್ರಕಾರ ಇವರು ಬಾಂಗ್ಲಾದೇಶದ ಸ್ಥಳೀಯರೇ ಇವರಿಗೂ ಐಸಿಎಸ್‌ಗೂ ಸಂಪರ್ಕವಿಲ್ಲ ಎಂದು ಅವರು ಹೇಳಿದ್ದಾರೆ.
Comments are closed.