ಕರಾಚಿ (ಪಿಟಿಐ): ಪಾಕಿಸ್ತಾನದ ಜನಪ್ರಿಯ ಖವ್ವಾಲಿ ಗಾಯಕ ಅಮ್ಜದ್ ಸಬ್ರಿ ಅವರನ್ನು ಬುಧವಾರ ಮಧ್ಯಾಹ್ನ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ.
ಕರಾಚಿಯ ಲಿಯಾಖತಾಬಾದ್ ಪ್ರದೇಶದಲ್ಲಿ ಗೆಳೆಯರೊಡನೆ ಅಮ್ಜದ್ ಸಬ್ರಿ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಆಗಂತುಕ ಗುಂಡಿನ ಮಳೆಗೆರೆದಿದ್ದಾರೆ. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಬ್ರಿ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಸಬ್ರಿ ಅವರ ದೇಹದೊಳಗೆ ಮೂರು ಗುಂಡು ಹೊಕ್ಕಿತ್ತು ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಖ್ಯಾತ ಖವ್ವಾಲಿ ಗಾಯಕ ದಿವಂಗತ ಗುಲಾಬ್ ಫರೀದ್ ಸಬ್ರಿ ಅವರ ಪುತ್ರನಾಗಿದ್ದಾರೆ ಅಮ್ಜದ್ ಸಬ್ರಿ.
ಅಂತರಾಷ್ಟ್ರೀಯ
Comments are closed.