ಕರ್ನಾಟಕ

ಸಿಎಂ ಏನು ದೊಡ್ಡ ಬೆಟ್ಟನಾ? ಅವನಿನ್ನೂ ಹುಡುಗ: ಜಾಫರ್ ಷರೀಫ್

Pinterest LinkedIn Tumblr

Jaffer-Shariefಬೆಂಗಳೂರು: ಸಚಿವ ಸಂಪುಟ ಪುನರ್‍ರಚನೆಯ ವೇಳೆ ಸಚಿವ ಸ್ಥಾನ ಕಳೆದುಕೊಂಡಿರುವ ಶಾಸಕ ಅಂಬರೀಷ್ ಅವರ ಫ್ಲಾಟ್‍ಗೆ ಕಾಂಗ್ರೆಸ್ ಹಿರಿಯ ಮುಖಂಡ ಸಿಕೆ ಜಾಫರ್ ಬುಧವಾರ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಅಂಬರೀಷ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಾಫರ್ ಶರೀಫ್ ಮುಖ್ಯಮಂತ್ರಿ ಸಿದ್ದರಾಮಯ್ಯನ ಮೂರ್ಖತನವೇ ಇದಕ್ಕೆಲ್ಲಾ ಕಾರಣ. ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ, ಮತ್ತು ಜನತೆ ಮುಖ್ಯವೇ ಹೊರತು ಸಿದ್ದರಾಮಯ್ಯ ಅಲ್ಲ.
ಸಿಎಂ ಯಾರ ಬಳಿಯೂ ಚರ್ಚಿಸದೆ ಸಂಪುಟ ಪುನರ್ ರಚನೆ ಮಾಡಿದ್ದು ತಪ್ಪು. ಅವನು ಕಾಂಗ್ರೆಸ್‍ನವ ಎಂಬ ನಂಬಿಕೆ ನನಗಿಲ್ಲ. ಅವನು ಅಧಿಕಾರಕ್ಕಾಗಿ ಕಾಂಗ್ರೆಸ್‍ಗೆ ಬಂದವನು. ಅಧಿಕಾರ ಹೋದ ಬಳಿಕ ಇಲ್ಲಿರುವುದೇ ಅನುಮಾನ . ಸಿಎಂ ಏನು ದೊಡ್ಡ ಬೆಟ್ಟನಾ..ಅವನಿನ್ನೂ ಹುಡುಗ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

Comments are closed.